ಕಿಂಗಫಿಶರ್ ವಿಮಾನ (ಸಂಗ್ರಹ ಚಿತ್ರ) 
ವಾಣಿಜ್ಯ

ಕಿಂಗ್​ಫಿಷರ್ ಏರ್ ಲೈನ್ಸ್ ಲಾಂಛನ, ಬ್ರ್ಯಾಂಡ್ಸ್ ಹರಾಜೂ ವಿಫಲ

ಸಾಲ ಮರುಪಾವತಿಗಾಗಿ ಸಾಲದ ದೊರೆ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್ ನೈಲ್ಸ್ ನ ಲಾಂಛನ ಹಾಗೂ ಬ್ರ್ಯಾಂಡ್ ಅನ್ನು ಹರಾಜಿಗಿಟ್ಟಿದ್ದ...

ಮುಂಬೈ: ಸಾಲ ಮರುಪಾವತಿಗಾಗಿ ಸಾಲದ ದೊರೆ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಏರ್ ನೈಲ್ಸ್ ನ ಲಾಂಛನ ಹಾಗೂ ಬ್ರ್ಯಾಂಡ್ ಅನ್ನು ಹರಾಜಿಗಿಟ್ಟಿದ್ದ ಬ್ಯಾಂಕ್ ಗಳಿಗೆ ತೀವ್ರ ನಿರಾಶೆಯಾಗಿದ್ದು, ಇದರಿಂದ ಮದ್ಯದ ದೊರೆಯ ಆಸ್ತಿ ಹರಾಜು ಶನಿವಾರ ಮತ್ತೆ ವಿಫಲಗೊಂಡಿದೆ.
ಕಿಂಗ್ ಫಿಷರ್ ಏರ್​ಲೈನ್ಸ್​ನ ಲಾಂಛನ ಮತ್ತು ಬ್ರ್ಯಾಂಡ್​ಗಳಿಗೆ ನಿಗದಿಪಡಿಸಲಾಗಿದ್ದ ಮೂಲದರ 366.70 ಕೋಟಿ ರುಪಾಯಿಗಳಿಗಿಂತ ಮೇಲೆ ಬಿಡ್ ಮಾಡಲು ಯಾರೂ ಮುಂದೆ ಬರಲಿಲ್ಲ. ಒಬ್ಬನೇ ಒಬ್ಬ ಬಿಡ್ಡರ್​ನನ್ನು ಸೆಳೆಯಲೂ ಸಾಲನೀಡಿಕೆದಾರರಿಗೆ ಸಾಧ್ಯವಾಗಲಿಲ್ಲ.
ಕಿಂಗ್ ಫಿಷರ್ ಏರ್​ಲೈನ್ಸ್​ನಿಂದ ಬರಬೇಕಾದ ಬಾಕಿ ಹಣ ವಸೂಲಿ ಸಲುವಾಗಿ 17 ಬ್ಯಾಂಕುಗಳ ಒಕ್ಕೂಟ ನಡೆಸಿದ ಎರಡನೇ ಸಲದ ಹರಾಜು ಯತ್ನ ಇದಾಗಿದ್ದು, ಈ ಹಿಂದೆ ಗೋವಾದಲ್ಲಿದ್ದ ವಿಮಾನಯಾನ ಸಂಸ್ಥೆಯ ಕೇಂದ್ರ ಕಚೇರಿ ಕಿಂಗ್ ಫಿಷರ್ ಹೌಸ್ ಹರಾಜು ಹಾಕಿ ವಿಫಲವಾಗಿತ್ತು. ಆಗಲೂ ನಿಗದಿ ಪಡಿಸಿದ ಮೂಲದರಕ್ಕೆ ಬಿಡ್ ಮಾಡಲು ಯಾರೂ ಕೂಡ ಮುಂದೆ ಬಂದಿರಲಿಲ್ಲ.
ಇಂದು ಹರಾಜಿಗೆ ಇಡಲಾಗಿದ್ದ ವಸ್ತುಗಳಲ್ಲಿ ‘ಫ್ಲೈ ದಿ ಗುಡ್ ಟೈಮ್್ಸ’ ಬರಹವುಳ್ಳ ಕಿಂಗ್​ಫಿಷರ್ ಲಾಂಛನ, ಫ್ಲೈಯಿಂಗ್ ಮಾಡೆಲ್​ಗಳು, ಫನ್​ಲೈನರ್, ಫ್ಲೈ ಕಿಂಗ್​ಫಿಷರ್ ಮತ್ತು ಫ್ಲೈಯಿಂಗ್ ಬರ್ಡ್ ಸಾಧನ ಸೇರಿದ್ದವು. ಹರಾಜಿಗೆ ಮೂಲದರವಾಗಿ 366.70 ಕೋಟಿ ರೂಪಾಯಿ ನಿಗದಿ ಪಡಿಸಲಾಗಿತ್ತು. ಇದು ಬ್ಯಾಂಕುಗಳಿಗೆ ಬರಬೇಕಾಗಿರುವ ಸಾಲದ ಮೊತ್ತದ ಹತ್ತನೇ ಒಂದು ಭಾಗಕ್ಕಿಂತಲೂ ಕಡಿಮೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT