ವಾಣಿಜ್ಯ

ಬಜೆಟ್ ಗೂ ಮುನ್ನ ಭಾರತ ಜಿಡಿಪಿ ಶೇಕಡಾ 7.6 ರಷ್ಟು ಪ್ರಗತಿ

Sumana Upadhyaya

ನವದೆಹಲಿ: ಭಾರತದ ಆರ್ಥಿಕ ಪ್ರಗತಿಯನ್ನು ಅಳೆಯುವ ಒಟ್ಟು ದೇಶೀಯ ಉತ್ಪನ್ನ ಮೊತ್ತ ಡಿಸೆಂಬರ್ ಕೊನೆಗೆ ತ್ರೈಮಾಸಿಕದಲ್ಲಿ ಶೇಕಡಾ 7.3ರಷ್ಟು ವೃದ್ಧಿಯಾಗಿದೆ. ಈ ವರ್ಷದ ವಾರ್ಷಿಕ ಆರ್ಥಿಕ ಪ್ರಗತಿ ಶೇಕಡಾ 7.6ರಷ್ಟಾಗಬಹುದು ಎಂದು ಸರ್ಕಾರ ನಿರೀಕ್ಷಿಸಿದ್ದು, ಅದು ಅಂದಾಜಿಗಿಂತ ಸ್ವಲ್ಪ ಜಾಸ್ತಿಯಾಗಿದೆ.

ವಾರ್ಷಿಕ ಜಿಡಿಪಿ ಮೇಲ್ಮುಖವಾಗಿ ಪರಿಷ್ಕರಣೆಯ ಪ್ರಭಾವ ಇದೇ ತಿಂಗಳ 29ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಮಂಡಿಸಲಿರುವ ಸಾಮಾನ್ಯ ಬಜೆಟ್ ನಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ.

ಕಳೆದ ಏಪ್ರಿಲ್ ನಿಂದ ಈವರೆಗೆ ತ್ರೈಮಾಸಿಕ ಆರ್ಥಿಕ ಬೆಳವಣಿಗೆ ಏರುಗತಿಯಲ್ಲಿಯೇ ಸಾಗುತ್ತಿದೆ. ಸೇವಾ ವಲಯ, ಕೈಗಾರಿಕಾ ವಲಯ, ಉತ್ಪಾದನಾ ವಲಯ ಪ್ರಗತಿ ಕಾಣುತ್ತಿದೆ. ಆದರೆ ಕೃಷಿ ವಲಯದ ಬೆಳವಣಿಗೆ ಕುಂಠಿತಗೊಂಡಿದೆ.

ಇತ್ತೀಚಿನ ದಾಖಲೆಗಳ ಪ್ರಕಾರ, ಭಾರತದ ಆರ್ಥಿಕತೆ ಚೀನಾ ದೇಶಕ್ಕಿಂತಲೂ ಮುನ್ನಡೆ ಕಾಣುತ್ತಿದ್ದು, ಅಲ್ಲಿ ಡಿಸೆಂಬರ್ ತ್ರೈಮಾಸಿಕಕ್ಕೆ ಕಳೆದ ಏಳು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಶೇಕಡಾ 6.8 ರಷ್ಟು ಆರ್ಥಿಕ ಪ್ರಗತಿ ಕಂಡಿದೆ.

SCROLL FOR NEXT