ಫ್ರೀಡಂ 251 ಸ್ಮಾರ್ಟ್ ಫೋನ್
ನೋಯ್ಡಾ: ಫ್ರೀಡಂ 251 ಸ್ಮಾರ್ಟ್ ಫೋನ್‌ಗೆ ಈಗಾಗಾಲೇ 25 ಲಕ್ಷ ಜನ ಬುಕಿಂಗ್ ಮಾಡಿದ್ದಾರೆ ಎಂದು ರಿಂಗಿಂಗ್ ಬೆಲ್ಸ್ ಕಂಪನಿಯ ಮಾಲೀಕರು ಹೇಳಿದ್ದಾರೆ. ರಿಂಗಿಂಗ್ ಬೆಲ್ಸ್ ಕಂಪನಿ ಆನ್‌ಲೈನ್ ಮೂಲಕ ಫ್ರೀಡಂ 251 ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು 'feedom251.com' ಎಂಬ ವೆಬ್‌ಸೈಟ್ ಮೂಲಕ ಬುಕಿಂಗ್ ವ್ಯವಸ್ಥೆ ಕಲ್ಪಿಸಿತ್ತು.
ಆದಾಗ್ಯೂ, ಫೋನ್ ಬುಕಿಂಗ್‌ಗಾಗಿ ಜನ ಮುಗಿಬಿದ್ದ ಕಾರಣ ಒಂದೇ ದಿನದಲ್ಲಿ ವೆಬ್‌ಸೈಟ್ ಕೂಡಾ ಸ್ಥಗಿತಗೊಂಡಿತ್ತು. ಸೆಕೆಂಡ್‌ಗೆ 6 ಲಕ್ಷ ಜನ ಈ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರುವ ಕಾರಣ ಸರ್ವರ್ ಕೈಕೊಟ್ಟಿತ್ತು. ಇದರೊಂದಿಗೇ ರಿಂಗಿಂಗ್ ಬೆಲ್ಸ್ ಕಂಪನಿ ನಕಲಿ ಕಂಪನಿ, ರು. 251 ಕಳೆದುಕೊಳ್ಳಬೇಡಿ ಎಂಬ ಎಚ್ಚರಿಕೆಯ ಸಂದೇಶಗಳೂ ವಾಟ್ಸಾಪ್‌ನಲ್ಲಿ ಹರಿದಾಡಿದ್ದವು.
ಈ ಸ್ಮಾಟ್ ಫೋನ್‌ಗೆ ಈಗ ತಯಾರಿ ಕಾರ್ಯ ಇನ್ನೂ ಆರಂಭವಾಗಲೇ ಇಲ್ಲ. ಏಪ್ರಿಲ್ ಅಂತ್ಯದಲ್ಲಿ ಫೋನ್ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ರಿಂಗಿಂಗ್ ಬೆಲ್ಸ್ ಕಂಪನಿ ಮಾಲಿಕ ಮೋಹಿತ್ ಗೋಯಲ್ ಹೇಳಿದ್ದಾರೆ.
ಇಲ್ಲಿಯವರೆಗೆ ಫೋನ್ ಬುಕ್ ಮಾಡಿದವರ ಹಣ ನನ್ನ ಅಕೌಂಟ್‌ಗೆ ಬಂದಿಲ್ಲ. ಫೋನ್ ಗ್ರಾಹಕರಿಗೆ ತಲುಪಿಸುವ ವರೆಗೆ ನನಗೆ ಆ ದುಡ್ಡು ಬೇಡ ಅಂದಿದ್ದಾರೆ ಘೋಯಲ್. ಅಂದಹಾಗೆ ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೊಂದು ವೈಶಿಷ್ಟ್ಯತೆಯಿರುವ ಫೋನ್ ಹೇಗೆ ಸಾಧ್ಯ? ಎಂದು ಕೇಳಿದಾಗ, ಇನ್ನೆರಡು ದಿನಗಳಲ್ಲಿ ನನ್ನ ಯೋಜನೆಯನ್ನು ಹೇಳುತ್ತೇನೆ. ಈಗಾಗಲೇ 25 ಲಕ್ಷ ಬುಕಿಂಗ್ ಆಗಿದ್ದು, ಏಪ್ರಿಲ್ ತಿಂಗಳಾಂತ್ಯದಲ್ಲಿ ನಾವು ಫೋನ್ ವಿತರಣೆ ಮಾಡಲಿದ್ದೇವೆ. ನೋಯ್ಡಾ ಮತ್ತು ಉತ್ತರಾಖಂಡ್ ನಲ್ಲಿ ಎರಡು ನಿರ್ಮಾಣ ಕೇಂದ್ರಗಳನ್ನು ನಾವು ಸ್ಥಾಪಿಸಲಿದ್ದೇವೆ.
ಫೋನ್ ನ ಪ್ರಧಾನ ನಿರ್ಮಾಣ ಘಟಕ ಈಗಾಗಲೇ ನೋಯ್ಡಾದಲ್ಲಿದೆ. ಶುಕ್ರವಾಪ ಬುಕಿಂಗ್ ಪೂರ್ಣಗೊಂಡಿದ್ದರೂ ಜನರು ಬೇರೆ ವಿಧಾನ ಮೂಲಕ ಫೋನ್ ಖರೀದಿ ಸಾಧ್ಯವೇ? ಎಂದು ಕೇಳಿ ರಿಂಗಿಂಗ್ ಬೆಲ್ಸ್‌ನ ಕಚೇರಿಗೂ ಬಂದಿದ್ದರು ಅಂತಾರೆ ಘೋಯಲ್.
ಕಟ್ಟಡವೊಂದರಲ್ಲಿ ಬಾಡಿಗೆ ಕೊಟ್ಟು ರಿಂಗಿಂಗ್ ಬೆಲ್ಸ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕಟ್ಟದ ಹೊರಗೆ ಹಿಂದಿಯಲ್ಲಿ ನೋಟಿಸ್ ಅಂಟಿಸಲಾಗಿದೆ. ಆ ನೋಟಿಸ್ ನಲ್ಲಿ ರಿಂಗಿಂಗ್ ಬೆಲ್ಸ್ ಫೋನ್ ಬೆಲೆ ರು. 251, ಡೆಲಿವರಿ ಚಾರ್ಜ್ 40 . ಅಂದರೆ ರು. 291 ಎಂದು ಬರೆಯಲಾಗಿದೆ.
ಅಂದರೆ ಬುಕಿಂಗ್ ಮೂಲಕ ಸಿಕ್ಕಿದ ಹಣ ರು. 72. 5 ಕೋಟಿ!