ನವದೆಹಲಿ : ಚೀನಾ ವ್ಯವಸಾಯ ಮಾರುಕಟ್ಟೆಯಲ್ಲುಂಟಾದ ತಲ್ಲಣ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಈ ಪ್ರಭಾವದಿಂದಾಗಿ ಸಂವೇದಿ ಸೂಚ್ಯಂಕ 500 ಪಾಯಿಂಟ್ ಇಳಿಕೆ ಕಂಡಿದೆ.
ಚೀನಾದ ಕೈಗಾರಿಕೋದ್ಯಮದಲ್ಲಿ ಉತ್ಪನ್ನಗಳ ಸಂಖ್ಯೆ ಇಳಿಮುಖವಾಗಿದ್ದು ಮತ್ತು ಯುವಾನ್‌ನ ಮೌಲ್ಯ ಕುಸಿತವುಂಟಾಗಿರುವುದು ಏಷ್ಯಾ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯುವಾನ್ ಮೌಲ್ಯದಲ್ಲಿ ಭಾರೀ ಕುಸಿತವುಂಟಾಗಿದೆ.
ನವೆಂಬರ್‌ನಲ್ಲಿ 48.6 ಪಾಯಿಂಟ್ ಇದ್ದ ಚೀನಾದ ಉತ್ಪಾದನಾ ಪಿಎಂಐ ಡಿಸೆಂಬರ್ ನಲ್ಲಿ 48. 2 ಕ್ಕೆ ಇಳಿದಿದೆ. ಈ ಕುಸಿತ ಕಂಡು ಬಂದ ಕಾರಣ ಚೀನಾ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ.