ನವದೆಹಲಿ: ಇನ್ನು ರೈಲ್ವೆ ಮುಂಗಡ ಬುಕ್ಕಿಂಗ್‍ಗೆ ಹೆಸರು ನೀಡುವಾಗ ನೀವು ಅರ್ಧ ಹೆಸರು, ಇನಿಷಿಯಲ್ ರಹಿತ ಹೆಸರು ಮುಂತಾದ ಎಡವಟ್ಟು ಮಾಡಿದರೆ ನಿಮ್ಮ ಟಿಕೆಟ್ ಕೈತಪ್ಪಲಿದೆ!
ಹೌದು, ಸುಳ್ಳು ಹೆಸರು, ಮಾಹಿತಿ ನೀಡಿ ಪ್ರಯಾಣಿಸುವುದನ್ನು ತಪ್ಪಿಸುವ ಕ್ರಮವಾಗಿ ಭಾರತೀಯ ರೈಲ್ವೆ , ತನ್ನ ಮುಂಗಡ ಬುಕ್ಕಿಂಗ್ ನಿಯಮ ಕಟ್ಟುನಿಟ್ಟು ಜಾರಿಗೆ ಆದೇಶಿಸಿದ್ದು, ಯಾವುದೇ ಪ್ರಯಾಣಿಕರು ತಮ್ಮ ಅಧಿಕೃತ ಹೆಸರನ್ನು ಇನಿಷಿಯಲ್ ಸಹಿತ ಪೂರ್ಣ ಬರೆಯದೇ ಇದ್ದಲ್ಲಿ ಅಂತಹ ಅರ್ಜಿಗಳನ್ನು ವಜಾಗೊಳಿಸುವಂತೆ ಆದೇಶಿಸಿದೆ.
ಹಾಗಾಗಿ ಇನ್ನು ಪೂರ್ಣ ಹೆಸರು ನಮೂದಿಸದೇ ಇದ್ದಲ್ಲಿ ನಿಮ್ಮ ಬುಕ್ಕಿಂಗ್ ಫಾರಂ ವಜಾ ಆಗುವುದು ನಿಶ್ಚಿತ.