ವಾಣಿಜ್ಯ

ತಯಾರಿಕೆ 2 ವರ್ಷಗಳಲ್ಲೇ ಹಿನ್ನಡೆ

Mainashree
ನವದೆಹಲಿ: ಕಳೆದ ಎರಡು ವರ್ಷಗಳಲ್ಲೇ ಮೊದಲ ಬಾರಿಗೆ ದೇಶದ ತಯಾರಿಕಾ ವಲಯದ ಪ್ರಗತಿ ಡಿಸೆಂಬರ್ ನಲ್ಲಿ ಕುಸಿತ ಕಂಡಿದೆ.
ಹೊಸ ಆರ್ಡರ್ ಗಳು ಗಣನೀಯವಾಗಿ ಇಳಿಮುಖ ಕಂಡಿರುವುದು, ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಉತ್ಪಾದನೆ ಕುಸಿದಿದ್ದು ಭಾರಿ ಹೊಡೆತ ನೀಡಿದೆ.
ತಯಾರಿಕಾ ವಲಯದ ಪ್ರಗತಿ ಕುರಿತು ವಿಶ್ಲೇಷಿಸುವ ಪರ್ಚೇಸ್ ಮ್ಯಾನೇಜರ್ಸ್ ಇಂಡೆಕ್ಸ್(ಪಿಎಂಐ) ಕಳೆದ ಏಳು ವರ್ಷಗಳಲ್ಲೇ ತೀರ್ವತರ ಕುಸಿತ ಕಂಡಿರುವುದರಿಂದ ದೇಶದ ತಯಾರಿಕಾ ವಲಯದ ಬೆಳವಣಿಗೆ ಕುರಿತು ಮತ್ತಷ್ಟು ಆತಂಕಗಳನ್ನು ಉಂಟು ಮಾಡಿದೆ.
ದೇಶದ ತಯಾರಿಕಾ ವಲಯದ ಅಭಿವೃದ್ಧಿ ವಿಶ್ಲೇಷಿಸುವ ನಿಕ್ಕಿ ಪಿಎಂಐ ಸೂಚ್ಯಂಕ ನವೆಂಬರ್ ನಲ್ಲಿ 50.3 ಇದ್ದದು ಡಿಸೆಂಬರ್ ನಲ್ಲಿ 49.1ಕ್ಕೆ ಇಳಿದಿದೆ. 2013ರ ಮಾರ್ಚ್ ನಂತರದಲ್ಲಿ ಇದು ಅತಿ ಕಡಿಮೆ ಸೂಚ್ಯಂಕವಾಗಿದೆ. 
ಪಿಎಂಐ 50ಕ್ಕಿಂತಲೂ ಹೆಚ್ಚಾಗಿದ್ದರೆ ಪ್ರಗತಿಯತ್ತ ಸಾಗಲಿದೆ ಎಂದಾಗಲಿದೆ, ಒಂದು ವೇಳೆ 50ಕ್ಕಿಂತ ಕೆಳಗಿಳಿದರೆ ಹಿಂಜರಿತದ ವಲಯದಲ್ಲಿದೆ ಎಂದಾಗಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.18ರಷ್ಟು ಜನ ಆರ್ಡರ್ ಗಳು ಗಣನೀಯವಾಗಿ ಕುಸಿದಿದೆ ಎಂದು ಹೇಳಿದ್ದಾರೆ.
SCROLL FOR NEXT