ಬೆಂಗಳೂರು: ದೇಶಾದ್ಯಂತ ಶುಕ್ರವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ.
ಎಸ್‍ಬಿಐ ಮತ್ತು ಅದರ ಸಹವರ್ತಿ ಬ್ಯಾಂಕ್‍ಗಳು ಸೇವಾ ನಿಯಮಗಳಲ್ಲಿ ಏಕಾಏಕಿ ಬದಲಾವಣೆ ತಂದು ಅನುಷ್ಠಾನಗೊಳಿಸಲಾಗುತ್ತದೆ ಎನ್ನುವುದು ಬ್ಯಾಂಕ್ ನೌಕರರ ಆರೋಪ.
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಕರೆ ನೀಡಿರುವ ಮುಷ್ಕರದಲ್ಲಿ ಅಧಿಕಾರಿ ವರ್ಗ ಭಾಗವಹಿಸುತ್ತಿಲ್ಲ.
ಜ.8ರಂದು ಮುಷ್ಕರವಾದರೆ, 2ನೇ ಶನಿವಾರ ಹಾಗೂ ಭಾನುವಾರ ಬ್ಯಾಂಕ್‍ಗಳಿಗೆ ರಜೆ ಇರುವುದರಿಂದ ಆ ಎರಡೂ ದಿನಗಳು ಸಹ ಬ್ಯಾಂಕ್‍ಗಳು ತೆರೆದಿರುವುದಿಲ್ಲ.
ನಿರಾಶೆಯ ವಿಶ್ವಬ್ಯಾಂಕ್ ಮುನ್ನೋಟ
2016ರಲ್ಲಿನ ಜಾಗತಿಕ ಆರ್ಥಿಕ ಪ್ರಗತಿಯನ್ನು ವಿಶ್ವಬ್ಯಾಂಕ್ ಕಡಿಮೆಗೊಳಿಸಿದೆ. ಚೀನಾ, ಬ್ರೆಜಿಲ್‍ನಂತಹ ವೇಗವಾಗಿ ಅಬಿsವೃದಿಟಛಿ ಕಾಣುತ್ತಿರುವ ದೇಶಗಳಲ್ಲಿನ ಪ್ರಗತಿ ಕುಸಿಯಲಿದೆ ಎಂದು ಹೇಳಿದೆ.
ಭೀತಿಗೊಂಡ ಹೂಡಿಕೆದಾರರು ವಹಿವಾಟಿನಿಂದ ಹಿಂದೆ ಸರಿದರು. ಆದರೂ ಭಾರತದ ಜಿಡಿಪಿ ಪ್ರಗತಿ ಮಾತ್ರ ಶೇ.7.8ರ ಪ್ರಮಾಣದಲ್ಲಿರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics