ತಿಂಗಳಾಂತ್ಯಕ್ಕೆ ಐಟಿ ರೀಫಂಡ್
ಸಣ್ಣ ಪ್ರಮಾಣದ ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ ಇದೆ. 64,938 ಮಂದಿ ತೆರಿಗೆದಾರರಿಗೆ ತಿಂಗಳಾಂತ್ಯಕ್ಕೆ...
ನವದೆಹಲಿ: ಸಣ್ಣ ಪ್ರಮಾಣದ ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ ಇದೆ. 64,938 ಮಂದಿ ತೆರಿಗೆದಾರರಿಗೆ ತಿಂಗಳಾಂತ್ಯಕ್ಕೆ ರು.1,148 ಕೋಟಿಮೊತ್ತವನ್ನು ಐಟಿ ಇಲಾಖೆ ಪಾವತಿ ಮಾಡಲಿದೆ.
ಕೇಂದ್ರ ನೇರ ತೆರಿಗೆ ಮಂಡಳಿಯಿಂದ ಸುದ್ದಿ ಸಂಸ್ಥೆ ಪಿಟಿಐ ಪಡೆದುಕೊಂಡಿರುವ ಮಾಹಿತಿ ಯಲ್ಲಿ ಈಅಂಶ ಉಲ್ಲೇಖಿತವಾಗಿದೆ. 2013-14 ಮತ್ತು2014-15ನೇ ಸಾಲಿಗೆ ಸಂಬಂಧಿಸಿದ್ದಾಗಿದೆ.
ಇತ್ತೀಚೆಗಷ್ಟೇ ಅಖಿಲ ಭಾರತ ಮಟ್ಟದಲ್ಲಿ ಆದಾಯತೆರಿಗೆ ಅಧಿಕಾರಿಗಳ ಸಭೆ ನಡೆದಿತ್ತು. ಅದರಲ್ಲಿ ಬಾಕಿಪಾವತಿ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆಸೂಚಿಸಲಾಗಿತ್ತು. ಜ.1ರಿಂದ 10ರ ಅವಧಿಯಲ್ಲಿರು.1,793 ಕೋಟಿ ಮೊತ್ತವನ್ನು ಕರದಾತರಿಗೆನೀಡಲಾಗಿದೆ.