ವಾಣಿಜ್ಯ

ಟಾಟಾ ಹಿಟಾಚಿಯ ಧಾರವಾಡ ಘಟಕದಿಂದ 50,000ನೇ ಯಂತ್ರ ಬಿಡುಗಡೆ

ಟಾಟಾ ಹಿಟಾಚಿಯ ಧಾರವಾಡ ಘಟಕವು ಬುಧವಾರ 50,000ನೇ ಯಂತ್ರವನ್ನು ಬಿಡುಗಡೆ ಮಾಡಿದ್ದನ್ನು ಪ್ರಕಟಿಸಿತು.

ಧಾರವಾಡ: ಟಾಟಾ ಹಿಟಾಚಿಯ ಧಾರವಾಡ ಘಟಕವು ಬುಧವಾರ 50,000ನೇ ಯಂತ್ರವನ್ನು ಬಿಡುಗಡೆ ಮಾಡಿದ್ದನ್ನು ಪ್ರಕಟಿಸಿತು. ಇಎಕ್ಸ್200ಎಲ್‍ಸಿ ಸೂಪರ್ ಸೀರಿಸ್ ಹೈಡ್ರಾಲಿಕ್ ಎಕ್ಸವೇಟರ್ ಅನ್ನು ಹುಬ್ಬಳ್ಳಿಯ ಮೆಸರ್ಸ್ ಡಿಆರ್‍ಎನ್ ಇನ್‍ಫ್ರಾಸ್ಟ್ರಕ್ಚರ್‍ನ ಆರ್.ಎನ್. ನಾಯಕ್ ಮತ್ತು ದಿನೇಶ್ ಆರ್ ನಾಯಕ್ ಅವರಿಗೆ ಹಸ್ತಾಂತರಿಸಿತು. ಡಿಆರ್‍ಎನ್ ಇನ್‍ಫ್ರಾಸ್ಟ್ರಕ್ಚರ್ ನೀರಾವರಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಮುಂಚೂಣಿಯಲ್ಲಿ ಇದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿದೆ. ತನ್ನ ಯೋಜನೆಗಳಲ್ಲಿ 100ಕ್ಕೂ ಹೆಚ್ಚು ಟಾಟಾ ಹಿಟಾಚಿ ಮಷೀನ್‍ಗಳನ್ನು ನಿಯೋಜಿಸಿರುವ ಡಿಆರ್‍ಎನ್ ಇನ್‍ಫ್ರಾಸ್ಟಕ್ಚರ್ ಸಂಸ್ಥೆ ಟಾಟಾ ಹಿಟಾಚಿ ಕಂಪೆನಿಯ ಜೊತೆಗೆ ಸುದೀರ್ಘ ಅವಧಿಯಲ್ಲಿ ಬಾಂಧವ್ಯ ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಿಆರ್‍ಎನ್ ಇನ್ಫಾಸ್ಟ್ರಕ್ಚರ್‍ನ ವ್ಯವಸ್ಥಾಪಕ ನಿರ್ದೇಶಕ ದೀಪಾ ದಿನೇಶ್ ನಾಯಕ್ ಅವರು, ‘ನಾವು ಟಾಟಾ ಹಿಟಾಚಿಯ ನಿಷ್ಟ ಮತ್ತು ಸಂತೃಪ್ತ ಗ್ರಾಹಕರಾಗಿದ್ದೇವೆ. ಕಂಪೆನಿ ಜೊತೆಗೆ ಮೂರು ದಶಕಗಳಿಂದ ಬಾಂಧವ್ಯವಿದ್ದು, ಅವರ ಉತ್ಪನ್ನಗಳು ಮತ್ತು ಗುಣಮಟ್ಟ ಕುರಿತು ನಮಗೆ ಸಮಾಧಾನಕರವಿದೆ. ಧಾರವಾಡ ಘಟಕದಿಂದ 2006ರಲ್ಲಿ 10,000ನೇ ಯಂತ್ರವನ್ನು ಪಡೆದುಕೊಂಡಿದ್ದೇವೆ ಎಂಬ ಸಮಾಧಾನವಿತ್ತು. ಇಂದು, ಮತ್ತೆ ನಾವು ಇದೇ ಘಟಕದಿಂದ 50,000ನೇ ಮಷೀನ್ ಅನ್ನು ಸ್ವೀಕರಿಸುತ್ತಿದ್ದೇವೆ. ನಾವು ಟಾಟಾ ಹಿಟಾಚಿಯಿಂದ 100,000ನೇ ಮಷೀನ್ ಸ್ವೀಕರಿಸುವ ಘಳಿಗೆಗಾಗಿ ಕಾತುರದಿಂದ ನಿರೀಕ್ಷಿಸುತ್ತಿದ್ದೇವೆ’ ಎಂದರು.

ಯಂತ್ರ ಹಸ್ತಾಂತರಿಸಿದ ಟಾಟಾ ಹಿಟಾಚಿಯ ನಿರ್ದೇಶಕ ಮತ್ತು ಹಿರಿಯ ಸಲಹೆಗಾರ ಕೆ. ಕಿಮುರಾ, `ನಮ್ಮ ಕಂಪೆನಿ ವಿಶೇಷವಾಗಿ ಧಾರವಾಡ ಘಟಕದ ಹೆಮ್ಮೆಯ ಕ್ಷಣ ಇದು. ಡಿಆರ್‍ಎನ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಗೆ 50,000ನೇ ಮಷೀನ್ ಹಸ್ತಾಂತರಿಸಲು ನಮಗೆ ಹೆಮ್ಮೆಯಾಗಲಿದೆ. ಅವರು ನಮಗೆ ಮೌಲ್ಯಯುತ, ವಿಶೇಷ ಗ್ರಾಹಕರು. ಟಾಟಾ ಹಿಟಾಚಿಯು ಗ್ರಾಹಕರೊಂದಿಗೆ ಸುದೀರ್ಘ ಕಾಲದ ಬಾಂಧವ್ಯವನ್ನು ಹೊಂದಲಿದ್ದು, ಅವರ ಅಗತ್ಯಗಳಿಗೆ ಸ್ಪಂದಿಸಲಿದೆ’ ಎಂದು ಹೇಳಿದರು.

ಕಂಪೆನಿ ಸಿದ್ಧಾಂತಕ್ಕೆ ಅನುಗುಣವಾಗಿ ಕಂಪೆನಿಯು, ಉತ್ಪನ್ನ ಮಾರಾಟದ ಆದಾಯವನ್ನು ಟಾಟಾ ಹಿಟಾಚಿ ಘಟಕದ ಆಸುಪಾಸಿನ ಸಮುದಾಯದ ಪ್ರಗತಿಗೆ ವಿನಿಯೋಗಿಸಲಾಗುತ್ತದೆ
118 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಟಾಟಾ ಹಿಟಾಚಿ ಉತ್ಪಾದಕ ಸೌಲಭ್ಯವು ಧಾರವಾಡದಲ್ಲಿ 1998ರಲ್ಲಿ ಆರಂಭವಾಯಿತು. ಮಿನಿ ಮತ್ತು ಮಿಡಿ ಎಕ್ಸವೇಟರ್, ಬ್ಯೊಕೊ ಲೋಡರ್ ವಲಯದ ಅಗತ್ಯಗಳಿಗೆ ಸ್ಪಂದಿಸಿತು. ಟಾಟಾ ಹಿಟಾಚಿಯ ಶೇ 60ರಷ್ಟು ಉತ್ಪನ್ನವನ್ನು ಧಾರವಾಡ ಘಟಕದಿಂದ ಪೂರೈಸಲಾಗಿದೆ. ಘಟಕವು ವಿಶೇಷ ಪ್ಲಾಂಟ್-ಇನ್-ಪ್ಲಾಂಟ್ ಚಿಂತನೆಯನ್ನು ಒಳಗೊಂಡಿದೆ. ಪ್ರಸ್ತುತ ಸ್ಥಾವರವು ಫ್ಯಾಬ್ರಿಕೇಷನ್, ಗೇರ್ಸ್, ಹೊಸಸ್, ಪೈಪ್ಸ್‍ಗಳ ಉತ್ಪಾದನೆ ಒಳಗೊಂಡಿದೆ. ಟಾಟಾ ಹಿಟಾಚಿ ಧಾರವಾಡ ಘಟಕಕ್ಕೆ ಐಎಸ್‍ಒ 9001:2008, ಐಎಸ್‍ಒ 14001:2004 ಮತ್ತು ಒಎಚ್‍ಎಸ್‍ಎಎಸ್ 18001:2007 ಶ್ರೇಣಿಯ ಪ್ರಮಾಣಪತ್ರ ಹೊಂದಿದ್ದು, ಗುಣಮಟ್ಟ ಮತ್ತು ಪರಿಸರ ರಕ್ಷಣೆಯ ಕ್ರಮಗಳನ್ನು ಇದು ಬಿಂಬಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!