ನವದೆಹಲಿ: ಕೈಗಾರಿಕಾ ಉತ್ಪಾದನೆ ಜನವರಿ ತಿಂಗಳಲ್ಲಿ ಶೇ.(-) 1 .53 ರಷ್ಟು ಕುಸಿದಿದ್ದು , ಶೇ. (-)1 .18 ರಿಂದ ಕುಸಿತ ಕಂಡಿದೆ.
2014 ರ ಜನವರಿಯಲ್ಲಿ ಕೈಗಾರಿಕಾ ಉತ್ಪನ್ನದಲ್ಲಿ ಶೇ.2 .8 ರಷ್ಟು ಬೆಳೆವಣಿಗೆಯಾಗಿತ್ತು. ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕದ ಬಗ್ಗೆ ಮಾ.11 ರಂದು ಬಿಡುಗಡೆಯಾಗಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೈಗಾರಿಕಾ ಉತ್ಪನ್ನಗಳ ಒಟ್ಟಾರೆ ಬೆಳವಣಿಗೆ ಶೇ.2.7 ರಷ್ಟು ಏರಿಕೆ ದಾಖಲಿಸಿದೆ ಎಂದು ತಿಳಿದುಬಂದಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಬೆಳೆವಣಿಗೆ ದರ ಶೇ.2 .6 ರಷ್ಟಿತ್ತು. ಕೈಗಾರಿಕಾ ಉತ್ಪಾದನೆ ಕಳೆದ ಡಿಸೆಂಬರ್‌ನಲ್ಲಿ ಶೇ.(-)1.3 ರಷ್ಟು ಕುಸಿದಿತ್ತು. ವಿದ್ಯುತ್ ಉತ್ಪಾದನೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದ್ದು ಕಳೆದ ಡಿಸೆಂಬರ್ ನಲ್ಲಿ ಶೇ.3 .2 ರಷ್ಟಿದ್ದದ್ದು ಈಗ ಶೇ.6 .6 ಕ್ಕೆ ಏರಿಕೆಯಾಗಿದೆ.