ನವದೆಹಲಿ: ದುರ್ಬಲ ಜಾಗತಿಕ ಸೂಚ್ಯಂಕಗಳ ನಂತರ ಷೇರುಗಳ ಊಹಾತ್ಮಕ ಮಾರಾಟದಿಂದಾಗಿ ಚಿನ್ನದ ಬೆಲೆ ಗ್ರಾಂಗೆ 84 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 29 ಸಾವಿರದ 325 ರೂಪಾಯಿ ಆಗಿದೆ.
ಅಮೆರಿಕದ ಫೆಡರಲ್ ರಿಸರ್ವ್ ನಲ್ಲಿ ಬಡ್ಡಿದರ ಇಳಿಕೆಯಾದ ಹಿನ್ನೆಲೆಯಲ್ಲಿ ಇನ್ನು ಕೆಲವು ತಿಂಗಳುಗಳವರೆಗೆ ಹಳದಿ ಲೋಹದ ಬೆಲೆ ಕಡಿಮೆಯಿರಬಹುದೆಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಿಂಗಾಪುರದಲ್ಲಿ ಚಿನ್ನದ ಬೆಲೆ ಶೇಕಡಾ 0.40ರಷ್ಟು ಇಳಿಕೆಯಾಗಿದೆ.