ನವದೆಹಲಿ: ದಂತ ಸುರಕ್ಷಾ ಉತ್ಪನ್ನಗಳ ಮಾರುಕಟ್ಟೆ ವಲಯದಲ್ಲಿ ಸ್ಪರ್ಧೆ ಹೆಚ್ಚಾಗಿರುವುದರಿಂದ ಕೋಲ್ಗೇಟ್ ಪಾಮೋಲಿವ್ ಕಂಪನಿ ಈಗ ನೈಸರ್ಗಿಕ ಉತ್ಪನ್ನಗಳ ಹಾದಿ ಹಿಡಿದಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದಿಕ್‌ಗೆ ಬೇಡಿಕೆ ಜಾಸ್ತಿಯಾಗಿರುವ ಕಾರಣ ಕೋಲ್ಗೇಟ್ ನೈಸರ್ಗಿಕ ಉತ್ಪನ್ನಗಳತ್ತ ಮುಖ ಮಾಡಿದೆ.
ಬಹುರಾಷ್ಟ್ರೀಯ ಕಂಪನಿಯಾಗಿರುವ ಕೋಲ್ಗೇಟ್ ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸುತ್ತಿದೆ ಎಂಬ ವಿಷಯವನ್ನು ಕೋಲ್ಗೇಟ್ ಸಿಇಒ ಇಯಾನ್ ಕುಕ್ ಒಪ್ಪಿಕೊಂಡಿದ್ದಾರೆ.
ಭಾರತದಲ್ಲಿ ನೈಸರ್ಗಿಕ ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತಿದೆ. ಇದನ್ನು ಮನಗಂಡ ಕೋಲ್ಗೇಟ್ ತಮ್ಮ ಆ್ಯಕ್ಟಿವ್ ಸಾಲ್ಟ್ ಪೇಸ್ಟ್ ನ್ನು ಹೊಸ ರೀತಿಯಲ್ಲಿ ಪ್ರಸ್ತುತ ಪಡಿಸಲು ಮುಂದಾಗಿದೆ.
ರು.6,000ಕೋಟಿಯ ಭಾರತೀಯ ದಂತ ಸುರಕ್ಷಾ ಉತ್ಪನ್ನ ವಲಯದಲ್ಲಿ 2015ರಲ್ಲಿ ಶೇ. 0.8 ಮಾತ್ರ ಬೆಳವಣಿಗೆ ಉಂಟಾಗಿದೆ.ಕಳೆದ ಎಂಟು ವರ್ಷಗಳಲ್ಲಿ ಕೋಲ್ಗೇಟ್ ಬೆಳವಣಿಗೆಯಲ್ಲಿ ಶೇ. 48 ರಿಂದ ಶೇ. 54ರಷ್ಟು ಪ್ರಗತಿ ಸಾಧಿಸಿದೆ.
ಈ ಮಾರುಕಟ್ಟೆಯಲ್ಲಿ ಶೇ 13 ರಿಂದ ಶೇ. 14ರ ವರೆಗೆ ನೈಸರ್ಗಿಕ ಉತ್ಪನ್ನಗಳು ಬಿಕರಿಯಾಗುತ್ತಿವೆ. ಆದರೆ ಈ ವಿಭಾಗದಲ್ಲಿ ಕೋಲ್ಗೇಟ್ ಮಾತ್ರ ಬೆಳವಣಿಗೆ ಕಂಡುಕೊಳ್ಳಲಿಲ್ಲ.
ಕೋಲ್ಗೇಟ್, ನೆಸ್ಲೇ ಮೊದಲಾದ ಕಂಪನಿಗಳಿಗೆ ಸೆಡ್ಡು ಹೊಡೆಯಲು ಪತಂಜಲಿ ವಿವಿಧ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಪತಂಜಲಿಗೆ ಪೈಪೋಟಿ ನೀಡಲು ಈ ಕಂಪನಿಗಳು ಕಾರ್ಯಪ್ರವೃತ್ತವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics