ನ್ಯೂಯಾರ್ಕ್: ಭಾರತೀಯ ಮೂಲದ ಉದ್ಯಮಿ ಸ್ಥಾಪಿಸಿದ್ದ ತಂತ್ರಜ್ಞಾನ ಸ್ಟಾರ್ಟ್-ಅಪ್ ಸಂಸ್ಥೆಯನ್ನು ಸರ್ಚ್ ದೈತ್ಯ ಗೂಗಲ್ ಖರೀದಿಸಿದೆ.
ಟೊರಂಟೋ ಮೂಲದ ಸಿನರ್ಜೈಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ, ವರುಣ್ ಮಲ್ಹೊತ್ರಾ ೨೦೧೩ರಲ್ಲಿ ಆ ಕಂಪನಿ ಪ್ರಾರಂಭಿಸಿದ್ದರು. ಗೂಗಲ್ ಆಪ್ ಗಳನ್ನು ಬಳಸುವುದನ್ನು ಬಳೆಕೆದಾರರಿಗೆ ತರಬೇತಿ ನೀಡುವ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯಾಗಿ ಇದನ್ನು ಅವರು ರೂಪಿಸಿದ್ದರು.
ಈ ಒಪ್ಪಂದದ ವಿವರಗಳನ್ನು ಗೂಗಲ್ ಬಹಿರಂಗಪಡಿಸಿಲ್ಲ. ಸಿನರ್ಜೈಸ್ ಗೂಗಲ್ ನಲ್ಲಿ ವಿಲೀನವಾಗಿರುವುದಕ್ಕೆ ಗೂಗಲ್ ಮತ್ತು ಸಾವಿರಾರು ಗೂಗಲ್ ಆಪ್ ಗ್ರಾಹಕರು ಸಂತಸಗೊಂಡಿದ್ದಾರೆ ಎಂದು ಗೂಗಲ್ ಆಪ್ಸ್ ನ ಕಾರ್ಯಕಾರಿ ಹಿರಿಯ ನಿರ್ದೇಶಕ ಪೀಟರ್ ಸ್ಕೋಕಿಮಾರ ಬ್ಲಾಗ್ ಬರಹದ ಮೂಲಕ ತಿಳಿಸಿದ್ದಾರೆ.
ಸಿನರ್ಜೈಸ್ ಗೂಗಲ್ ತಂಡವನ್ನು ಸೇರಲಿದ್ದು, ಅದರ ಉತ್ಪನ್ನಗಳನ್ನು ಗೂಗಲ್ ಆಪ್ಸ್ ನ ಭಾಗವಾಗಿ ಮುಂದಿನ ವರ್ಷ ಬಳಕೆದಾರರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗ ಗೂಗಲ್ ಆಪ್ ತಂಡವನ್ನು ಸೇರಿರುವುದರಿಂದ ಗೂಗಲ್ ಆಪ್ ಗಳನ್ನು ಅಭಿವೃದ್ಧಿ ಪಡಿಸುವ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಾಧ್ಯವಿದ್ದು ನಮ್ಮ ಗುರಿಯನ್ನು ತಲುಪಲು ಸುಲಭವಾಗಿದೆ ಎಂದು ಸಿನರ್ಜೈಸ್ ತಿಳಿಸಿದೆ.