ವಾಣಿಜ್ಯ

ದೇಶೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ನಂ.1 ಪಟ್ಟ

Sumana Upadhyaya

ಚೆನ್ನೈ: ಭಾರತ ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರು ಈಗಲೂ ಮೊದಲ ಸ್ಥಾನದಲ್ಲಿದ್ದು, ಆಲ್ಟೋ ಮಾಡೆಲ್ ಕಳೆದ ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಆಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 23ರಷ್ಟು ಮಾರಾಟದಲ್ಲಿ ಇಳಿಮುಖವಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಸುಮಾರು ಶೇಕಡಾ 25ರಷ್ಟು ಇಳಿಮುಖವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದಿಂದ ಮಾರಾಟದಲ್ಲಿ ಏರಿಕೆ ಕಂಡುಬಂದ ಕಂಪೆನಿಗಳಲ್ಲಿ ಮಾರುತಿ ಸುಜುಕಿಯ ವ್ಯಾಗನ್ ಆರ್ ಮುಂಚೂಣಿಯಲ್ಲಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ದಾಖಲೆ ತಿಳಿಸಿದೆ.

ಏಪ್ರಿಲ್ ತಿಂಗಳಿನಲ್ಲಿ ಮಾರಾಟಗೊಂಡ ಪ್ರಮುಖ 10 ಪ್ರಯಾಣ ವಾಹನಗಳಲ್ಲಿ ಏಳು ವಾಹನಗಳು ಮಾರುತಿ ಸುಜುಕಿ ಉತ್ಪನ್ನಗಳೇ ಆಗಿವೆ. ಆಲ್ಟೋ ಹೊರತುಪಡಿಸಿ ಎರಡನೇ ಸ್ಥಾನದಲ್ಲಿ ಪ್ರೀಮಿಯಂ ಹಾಚ್ ಬ್ಯಾಕ್ ಇದೆ. ಕಳೆದ ಏಪ್ರಿಲ್ ನಲ್ಲಿ 18 ಸಾವಿರದ 444 ಯೂನಿಟ್ ಗಳು ಮಾರಾಟವಾಗಿದ್ದರೆ ಈ ವರ್ಷ ಏಪ್ರಿಲ್ ನಲ್ಲಿ 15 ಸಾವಿರದ 661 ಆಗಿದೆ.

ಮಾರಾಟವಾದ ಟಾಪ್ 10 ಕಾರುಗಳಲ್ಲಿ ರೆನೌಲ್ಟ್ಸ್ ಮಾದರಿಯ ಕ್ವಿದ್ ಏಳನೇ ಸ್ಥಾನದಲ್ಲಿದೆ.ಸೆಲರಿಯೋ ಒಂಭತ್ತನೇ ಸ್ಥಾನ ಹಾಗೂ ಮಾರುತಿ ಸುಜುಕಿ ಒಮ್ನಿ ಹತ್ತನೇ ಸ್ಥಾನದಲ್ಲಿದೆ.

SCROLL FOR NEXT