ಮುಂಬೈ: ಶುಕ್ರವಾರದ ಬೆಳಗ್ಗೆ 10.30ರ ವೇಳೆಗೆ ಭಾರತದ ರೂಪಾಯಿ ಅಮೆರಿಕ ಡಾಲರ್ ಎದುರು 68 ರೂಪಾಯಿ 41 ಪೈಸೆಯಲ್ಲಿ ವಹಿವಾಟು ನಡೆಸುತ್ತಿತ್ತು.ಸೆಪ್ಟೆಂಬರ್ 22ರ ನಂತರ ಇಂದು ರೂಪಾಯಿ ಮೌಲ್ಯ ಶೇಕಡಾ 0.5ರಷ್ಟು ಗರಿಷ್ಟ ಏರಿಕೆಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಧ್ಯ ಪ್ರವೇಶ ಮತ್ತು ಏಷ್ಯಾ ಮಾರುಕಟ್ಟೆಯಿಂದ ಧನಾತ್ಮಕ ಸೂಚನೆ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗಲು ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ನಿನ್ನೆ ಡಾಲರ್ ಎದುರು ರೂಪಾಯಿ ಮೌಲ್ಯ 68 ರೂಪಾಯಿ 43 ಪೈಸೆಯಲ್ಲಿ ವಹಿವಾಟು ನಡೆಸುತ್ತಿತ್ತು. ಈ ಮಧ್ಯೆ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 234.36 ಅಂಕಗಳಷ್ಟು ಏರಿಕೆ ಕಂಡು 26,094.53ಕ್ಕೆ ಬೆಳಗ್ಗೆ 10.50ರ ವೇಳೆಗೆ ತಲುಪಿತ್ತು.