ವಾಣಿಜ್ಯ

ಭಾರತದಲ್ಲಿ ಮೊಬೈಲ್ ಆಧಾರಿತ ಉದ್ದಿಮೆಗೆ ಸಹಕರಿಸಲಿದ್ದೇವೆ: ಫೇಸ್ಬುಕ್

Guruprasad Narayana
ನವದೆಹಲಿ: ನೋಟು ಹಿಂಪಡೆತದಿಂದ ಉಂಟಾಗಿರುವ ನಗದು ಬಿಕ್ಕಟ್ಟಿನಿಂದ, ಮೊಬೈಲ್ ಬ್ಯಾಂಕಿಂಗ್ ನತ್ತ ಮುಖ ಮಾಡಿ ಎಂದು ಸರ್ಕಾರ ನೀಡಿರುವ ಕರೆಗೆ ಸ್ಪಂದಿಸಿರುವ ಸಾಮಾಜಿಕ ಜಾಲತಾಣ ದೈತ್ಯ ಫೇಸ್ಬುಕ್ ಭಾರತದಲ್ಲಿ ಮೊಬೈಲ್ ಆಧಾರಿತ ಉದ್ದಿಮೆಗೆ ಸಹಕರಿಸಲಿದ್ದೇವೆ ಎಂದು ಬುಧವಾರ ಹೇಳಿದೆ. 
'ಮೊಬೈಲ್ ಮೂವ್ಸ್ ಬ್ಯುಸಿನೆಸ್' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಫೇಸ್ಬುಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ, ಮೊಬೈಲ್ ಫೋನುಗಳ ಶಕ್ತಿಯನ್ನು ವೃದ್ಧಿಸಲು, ಸಾಕಾರಗೊಳಿಸಲು ತಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಪುನರುಚ್ಛಿಸಿದ್ದಾರೆ. 
"ಇಲ್ಲಿ ಉದ್ದಿಮೆ ಮತ್ತು ವ್ಯವಹಾರಗಳನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ. ಬ್ರಾಂಡ್ ಅಭಿವೃದ್ಧಿಯಾಗಲಿ, ಬೇಡಿಕೆ ವೃದ್ಧಿ, ಮಾರಾಟಕ್ಕೆ ಸಹಕಾರ ಇವೆಲ್ಲವಕ್ಕೂ ನಾವು ಸಹಕಾರ ನೀಡುವುದನ್ನು ಮುಂದುವರೆಸಲಿದ್ದೇವೆ" ಎಂದು ಬೇಡಿ ಹೇಳಿದ್ದಾರೆ. 
ಜಾಗತಿಕವಾಗಿ ೧.೭೧ ಬಿಲಿಯನ್ ಜನ ಫೇಸ್ಬುಕ್ ಬಳಸುತ್ತಿದ್ದು, ಭಾರತದಲ್ಲಿಯೇ ಫೇಸ್ಬುಕ್ ನಲ್ಲಿ ೨ ದಶಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಪುಟ ತೆರೆದಿವೆ. 
ಫೇಸ್ಬುಕ್ ಭಾರತದಲ್ಲಿ ೧೨ ಕ್ಕೂ ಹೆಚ್ಚು ಭಾಷೆಗಳಲ್ಲಿ ಸೇವೆ ಒದಗಿಸುತ್ತದೆ. 
SCROLL FOR NEXT