ಸಾಂದರ್ಭಿಕ ಚಿತ್ರ 
ವಾಣಿಜ್ಯ

ಗೃಹ, ವಾಹನ ಸಾಲದ ಬಡ್ಡಿದರ ಇಳಿಕೆ ನಿರೀಕ್ಷೆಯಲ್ಲಿ ಸಾಮಾನ್ಯ ಗ್ರಾಹಕ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಿಗೆ ನೀಡುವ ಹಣದ ಬಡ್ಡಿ ದರವನ್ನು ಶೇಕಡಾ 0.25ರಷ್ಟು ಕಡಿಮೆ...

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಿಗೆ ನೀಡುವ ಹಣದ ಬಡ್ಡಿ ದರವನ್ನು ಶೇಕಡಾ 0.25ರಷ್ಟು ಕಡಿಮೆ ಮಾಡಿ ಶೇಕಡಾ 6.25ಕ್ಕೆ ನಿಗದಿಪಡಿಸಿದೆ. ಇದರ ಪ್ರಯೋಜನ ಗ್ರಾಹಕರಿಗೆ ಸಿಗುತ್ತದೆ. ಮನೆ ಮತ್ತು ವಾಹನ ಸಾಲಗಳ ಬಡ್ಡಿದರ ಈ ವರ್ಷ ದೀಪಾವಳಿ ಹೊತ್ತಿಗೆ ಕಡಿಮೆಯಾಗಬಹುದು. 
ಕಳೆದ 20 ತಿಂಗಳಲ್ಲಿ ಆರ್ ಬಿಐ ಇದು 6ನೇ ಬಾರಿ ದರ ಕಡಿತ ಮಾಡುತ್ತಿದೆ. ಆದರೆ ಇದರ ಲಾಭ ಸಾಮಾನ್ಯ ಗ್ರಾಹಕರಿಗೆ ಸಿಗುತ್ತದೆಯೇ ಇಲ್ಲವೇ ಎಂಬುದು ಮುಖ್ಯವಾಗುತ್ತದೆ.
ಆರ್ ಬಿಐ 2015 ಜನವರಿಯಿಂದ 175 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಿದೆ. ಆದರೆ ಇದರ ಇಡೀ ಲಾಭವನ್ನು ಗ್ರಾಹಕರಿಗೆ ನೀಡಲು ಬ್ಯಾಂಕ್ ಗಳು ಒಪ್ಪುತ್ತಿಲ್ಲ. ಹೆಚ್ಚಿನ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯ ಮೊತ್ತವನ್ನು ಶೇಕಡಾ 0.6ಕ್ಕೆ ತಗ್ಗಿಸಲು ಮಾತ್ರ ಒಪ್ಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ 0.95ರಷ್ಟು ಕಡಿತ ಮಾಡಲಿವೆ.
ಬ್ಯಾಂಕುಗಳು ಗ್ರಾಹಕರ ಮೇಲಿನ ಬಡ್ಡಿದರವನ್ನು ಕಡಿತ ಮಾಡುವಲ್ಲಿ ವಿಳಂಬ ಮಾಡುವುದನ್ನು ತಡೆಗಟ್ಟಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಆರ್ ಬಿಐ ಕಳೆದ ಏಪ್ರಿಲ್ ನಲ್ಲಿ ಒಟ್ಟು ವೆಚ್ಚದ ಆಧಾರಿತ ಸಾಲ ಪ್ರಮಾಣ(ಎಂಸಿಎಲ್ಆರ್)ನ್ನು ಜಾರಿಗೆ ತಂದಿತ್ತು.
ಸಾಲದ ಮೇಲಿನ ಬಡ್ಡಿದರ ಕಡಿತ ನಿರ್ದಿಷ್ಟ ಸಮಯದವರೆಗೆ ಮಾತ್ರ ಇರುವುದರಿಂದ ಇದು ಕೂಡ ಗ್ರಾಹಕರಿಗೆ ತೊಂದರೆಯಾಗಿದೆ. ಹೀಗಾಗಿ ಬ್ಯಾಂಕುಗಳು ಬಡ್ಡಿದರವನ್ನು ಕಡಿತ ಮಾಡಿದರೂ ಕೂಡ ಅದರ ಪ್ರಯೋಜನ ಹೊಸ ಗ್ರಾಹಕರಿಗೆ ಮಾತ್ರ ಆಗುತ್ತದಷ್ಟೆ. ಹಳೆಯ ಗ್ರಾಹಕರು ನಿರ್ದಿಷ್ಟ ಅವಧಿಯವರೆಗೆ ಕಾಯಬೇಕು. ಇದಕ್ಕೆ ಒಪ್ಪುವ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್, ನಾವು ನಿರೀಕ್ಷೆ ಮಾಡುವುದಕ್ಕಿಂತ ಕಡಿಮೆ ಬಡ್ಡಿದರವನ್ನು ಬ್ಯಾಂಕುಗಳು ಗ್ರಾಹಕರಿಗೆ ನೀಡುತ್ತವೆ. 
ಪ್ರಸ್ತುತ ಆರ್ ಬಿಐ ಕಡಿತ ಮಾಡಿರುವ ರೆಪೊ ದರದ ಪ್ರಯೋಜನವನ್ನು ಬ್ಯಾಂಕುಗಳು ಗ್ರಾಹಕರಿಗೆ ಯಾವಾಗ ನೀಡುತ್ತವೆ ಎಂಬುದನ್ನು ನೋಡಬೇಕಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!