ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಅಮೆರಿಕದಲ್ಲಿ ದರ ಹೆಚ್ಚಳ ಭೀತಿ: ಸೆನ್ಸೆಕ್ಸ್‌ 439 ಅಂಕ ಕುಸಿತ

ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 439...

ಸಾಂದರ್ಭಿಕ ಚಿತ್ರ
Lingaraj Badiger
Updated On : 13 Oct 2016, 6:17 am
ಮುಂಬೈ: ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 439 ಅಂಕಗಳ ಕುಸಿತ ಕಂಡಿದೆ.
ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಈ ವರ್ಷಾಂತ್ಯ ತನ್ನ ಬಡ್ಡಿ ದರ ಏರಿಸುವುದು ಬಹುತೇಕ ಖಚಿತವೆಂಬ ಸುಳಿವು ಲಭಿಸಿರುವುದನ್ನು ಅನುಸಿರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು 439.23 ಅಂಕಗಳ ಭಾರೀ ನಷ್ಟದೊಂದಿಗೆ 27,643.11 ಅಂಕಗಳ ಮಟ್ಟದಲ್ಲಿ ಗುರುವಾರದ ವಹಿವಾಟನ್ನು ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 135.35 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,573.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

Advertisement

ಇಂದಿನ ವಹಿವಾಟಿನಲ್ಲಿ  ಜೆ ಆ್ಯಂಡ್‌ ಕೆ ಬ್ಯಾಂಕ್‌ ಶೇ.14ರಷ್ಟು ಹಾಗೂ ಟಿಸಿಎಸ್‌ ಶೇ.2ರಷ್ಟು ಕುಸಿದಿರುವುದು ಗಮನಾರ್ಹವಾಗಿದೆ. ಇದೇ ರೀತಿ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಶೇ.1.50 ಪ್ರಮಾಣದಲ್ಲಿ ಕುಸಿದಿವೆ. 
ಇನ್ನು ಸೆನ್ಸೆಕ್ಸ್ ಕುಸಿತ ಬೆನ್ನಲ್ಲೇ ರುಪಾಯಿ ಮೌಲ್ಯದಲ್ಲಿಯೂ ಕೂಡ ಕುಸಿತ ಕಂಡುಬಂದಿದ್ದು, ರುಪಾಯಿ ಮೌಲ್ಯ ಒಂದೇ ದಿನದಲ್ಲಿ 43 ಪೈಸೆ ಇಳಿಕೆಯಾಗುವುದರೊಂದಿಗೆ ರುಪಾಯಿ ದರ ಪ್ರತೀ  ಡಾಲರ್ ಗೆ 66.96 ರು. ಗೆ ಏರಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement