ಜಾಗತಿಕ ಷೇರು ಮಾರಾಟ: ಮುಂಬೈ ಸೆನ್ಸೆಕ್ಸ್ 546 ಅಂಕ ದಿಢೀರ್ ಕುಸಿತ
ಸೋಮವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ದಿಢೀರನೆ 546 ಅಂಕ ಕುಸಿದು...
ಮುಂಬೈ: ಸೋಮವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ದಿಢೀರನೆ 546 ಅಂಕ ಕುಸಿದು 28 ಸಾವಿರದ 251 ಕ್ಕೆ ತಲುಪಿತು. ನಿಫ್ಟಿ ಸಹ ಇಂದಿನ ವಹಿವಾಟು ಆರಂಭಕ್ಕೆ 8 ಸಾವಿರದ 700ಕ್ಕೆ ತಲುಪಿತು. ಅಮೆರಿಕಾದ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಏರಿಕೆಯಾಗುವ ಊಹಾಪೋಹ ಕೇಳಿಬಂದ ಹಿನ್ನೆಲೆಯಲ್ಲಿ ಷೇರುಗಳು ಇಂದು ಅಧಿಕವಾಗಿ ಮಾರಾಟಗೊಂಡು ಸೆನ್ಸೆಕ್ಸ್ ಕುಸಿತಗೊಂಡಿತು.
ಇದರ ಮಧ್ಯೆ, ಇಂದಿನ ವಹಿವಾಟು ಆರಂಭಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ 25 ಪೈಸೆ ಕುಸಿದು 66 ರೂಪಾಯಿ 93 ಪೈಸೆಯಷ್ಟಾಗಿದೆ.
ಇಂದು ಅಪರಾಹ್ನ ಬೃಹತ್ ಆರ್ಥಿಕ ಅಂಕಿಅಂಶ ಬಿಡುಗಡೆಯಾಗಲಿದ್ದು, ಅದರಲ್ಲಿ ಜುಲೈ ತಿಂಗಳ ಐಐಪಿ ಮತ್ತು ಆಗಸ್ಟ್ ತಿಂಗಳಿನಲ್ಲಿ ಹಣದುಬ್ಬರ ಅಂಕಿಅಂಶ ಬಿಡುಗಡೆಯಾಗಲಿದೆ.