ಜಿಯೋ 
ವಾಣಿಜ್ಯ

ಜಿಯೋ ಗೆ ವೊಡಾಫೋನ್ ಸವಾಲು: 1ಜಿಬಿ ಪ್ಲಾನ್‌ಗೆ 10 ಜಿಬಿ ಡೇಟಾ

ರಿಲಯನ್ಸ್‌ ಜಿಯೊ ಉಚಿತ ಕೊಡುಗೆಗಳಿಗೆ ಸವಾಲಾಗಿ ವೊಡಾಫೋನ್‌, 4ಜಿ ಮೊಬೈಲ್‌ ಬಳಕೆದಾರರಿಗಾಗಿ 1ಜಿಬಿ ಪ್ಲಾನ್‌ ದರದಲ್ಲೇ 10 ಜಿಬಿ ಡೇಟಾ ನೀಡುವುದಾಗಿ ..

ನವದೆಹಲಿ: ರಿಲಯನ್ಸ್‌ ಜಿಯೊ ಉಚಿತ ಕೊಡುಗೆಗಳಿಗೆ ಸವಾಲಾಗಿ ವೊಡಾಫೋನ್‌, 4ಜಿ ಮೊಬೈಲ್‌ ಬಳಕೆದಾರರಿಗಾಗಿ 1ಜಿಬಿ ಪ್ಲಾನ್‌ ದರದಲ್ಲೇ 10 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದೆ.

ಹೊಸ 4ಜಿ ಸ್ಮಾರ್ಟ್‌ಫೋನ್‌ ಹೊಂದಿರುವ ವೊಡಾಫೋನ್‌ ಗ್ರಾಹಕರು, 1ಜಿ ಬಿ ಪ್ಲಾನ್‌ ರಿಚಾರ್ಜ್‌ನೊಂದಿಗೆ ಹೆಚ್ಚುವರಿ 9 ಜಿಬಿಗಳನ್ನು ಪಡೆಯಲಿದ್ದಾರೆ. 2016 ಡಿಸೆಂಬರ್‌ 31ರೊಳಗೆ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಗ್ರಾಹಕರು 3ಜಿ ಅಥವಾ 4ಜಿ ಸೇವೆಯ ಈ ಆಫರ್‌ಗಳನ್ನು ಪಡೆಯಬಹುದಾಗಿದೆ.

ಈ ಆಫರ್‌ನ ಚಂದಾದಾರರು ವೊಡಾಫೋನ್‌ ಪ್ಲೇನಲ್ಲಿ ಉಚಿತವಾಗಿ ಟಿವಿ, ಚಲನಚಿತ್ರ ಹಾಗೂ ಹಾಡುಗಳನ್ನು ನೋಡಬಹುದಾಗಿದೆ. ಹೊಸ 4ಜಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಈ ಆಫರ್‌ ಲಭ್ಯವಾಗಲಿದೆ. ಈಶಾನ್ಯ ರಾಜ್ಯಗಳಲ್ಲೂ 4ಜಿ ಹ್ಯಾಂಡ್‌ಸೆಟ್‌ ಬಳಕೆದಾರರಿಗೆ ಈ ಆಫರ್‌ ಲಭ್ಯವಿದ್ದು, ಅದಕ್ಕೆ ಕಾಲಮಿತಿ ವಿಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT