ವಾಣಿಜ್ಯ

ನೋಟ್ ನಿಷೇಧದ ನಂತರ ಡಿಜಿಟಲ್ ವಹಿವಾಟು 23 ಪಟ್ಟು ಹೆಚ್ಚಳ

Lingaraj Badiger
ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟ್ ಗಳನ್ನು ನಿಷೇಧಿಸಿದ ನಂತರ ಡಿಜಿಟಲ್ ವಹಿವಾಟು 23 ಪಟ್ಟು ಹೆಚ್ಚಳವಾಗಿದ್ದು. ಮಾರ್ಚ್ ವರೆಗೆ 2,425 ಕೋಟಿ ರುಪಾಯಿ ಮೌಲ್ಯದ ಸುಮಾರು 64 ಲಕ್ಷ ಡಿಜಿಟಲ್ ವಹಿವಾಟುಗಳು ನಡೆದಿವೆ.
ನವೆಂಬರ್ 2016ರ ವರೆಗೆ 101 ಕೋಟಿ ರುಪಾಯಿ ಮೌಲ್ಯದ 2,80,000 ಡಿಜಿಟಲ್ ವಹಿವಾಟುಗಳು ನಡೆದಿದ್ದವು. ಆದರೆ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮೌಲ್ಯದ ನೋಟ್ ಅಮಾನ್ಯಗೊಳಿಸಿದ ನಂತರ ಡಿಜಿಟಲ್ ವ್ಯವಹಾರದಲ್ಲಿ 23 ಪಟ್ಟು ಹೆಚ್ಚಳವಾಗಿದೆ ಎಂದು ನೀತಿ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನೋಟ್ ನಿಷೇಧದ ನಂತರ ಆಧಾರ್ ಆಧಾರಿತ ಪಾವತಿಗಳ ಪ್ರಮಾಣ ಸಹ ಹೆಚ್ಚಾಗಿದ್ದು, ನವೆಂಬರ್ 2016ರಿಂದ ಮಾರ್ಚ್ 2017ರ ವರೆಗೆ 2.5 ಕೋಟಿಯಿಂದ 5 ಕೋಟಿಗೆ ಹೆಚ್ಚಳವಾಗಿದೆ ಎಂದು ನೀತಿ ಆಯೋಗ ತಿಳಿಸಿದೆ.
ನೋಟ್ ನಿಷೇಧದ ನಂತರ ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಇದ್ದಕ್ಕಾಗಿ ಲಕ್ಕಿ ಗ್ರಾಹಕ ಯೋಜನೆ, ಡಿಜಿಧನ್ ವ್ಯಾಪಾರ ಯೋಜನೆಗಳನ್ನು ಜಾರಿಗೆ ತಂದಿದೆ.
SCROLL FOR NEXT