ನವದೆಹಲಿ: 2016 ರಲ್ಲಿ ಶೇ.6.8 ರಷ್ಟಿದ್ದ ಭಾರತದ ಆರ್ಥಿಕ ಬೆಳವಣಿಗೆ 2017 ರಲ್ಲಿ ಶೇ.7.2 ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
ಸಮಯಕ್ಕೆ ಸರಿಯಾಗಿ ಜಿಎಸ್ ಟಿ ಅನುಷ್ಠಾನ ಮಾಡುವುದು ಆರ್ಥಿಕ ಚಟುವಟಿಕೆಗಳಿಗೆ ನೆರವಾಗಲಿದೆ. ಆದರೆ ಆರ್ಥಿಕ ಬೆಳವಣಿಗೆ ವಿಷಯದಲ್ಲಿ ತೊಡಕಾಗಬಹುದಾದ ಬಡತನ ನಿರ್ಮೂಲನೆ ಭಾರತಕ್ಕೆ ಅತ್ಯಂತ ಸವಾಲಿನ ಸಂಗತಿಯಾಗಲಿದೆ ಎಂದು ವಿಶ್ವಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
2019-20 ನೇ ಸಾಲಿನಲ್ಲಿ ಖಾಸಗಿ ಹೂಡಿಕೆ ಚೇತರಿಕೆ ಕಾಣುವ ವಿಶ್ವಾಸವಿದ್ದು ಭಾರತದ ಆರ್ಥಿಕತೆ ಶೇ.7.7 ರಷ್ಟಾಗಲಿದೆ. ಮುಂದುವರೆಯುತ್ತಿರುವ ಜಾಗತಿಕ ಅಸ್ಥಿರತೆಯಿಂದಾಗಿ ಬಾಹ್ಯ ಬೇಡಿಕೆ ಚೇತರಿಕೆ ಕಾಣುವುದಕ್ಕೂ ವಿಳಂಬವಾಗಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಎರಡನೆಯದ್ದಾಗಿ ನೋಟು ನಿಷೇಧದಿಂದ ಸಣ್ಣ ಮತ್ತು ಅನೌಪಚಾರಿಕ ಸಂಸ್ಥೆಗಳು ಎಷ್ಟರ ಮಟ್ಟಿಗೆ ಕೆಲಸಗಳಿಗೆ ಕತ್ತರಿ ಹಾಕಿದೆ ಎಂಬುದರ ಬಗ್ಗೆಯೂ ನಿಖರ ಮಾಹಿತಿ ಇಲ್ಲ. ಮೂರನೆಯದ್ದಾಗಿ ಖಾಸಗಿ ಹೂಡಿಕೆಗಳು ಕಾರ್ಪೊರೇಟ್ ಸಾಲದ ಓವರ್ ಹ್ಯಾಂಗ್, ನೀತಿಗಳ ಸವಾಲಿನ ರೂಪದಲ್ಲಿ ಅಡ್ಡಿಗಳನ್ನು ಎದುರಿಸುತ್ತಿದೆ. ಈ ನಡುವೆ ಜಿಎಸ್ ಟಿಯ ಜಾರಿ 2017-18 ವರ್ಶದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.