ವಾಣಿಜ್ಯ

ಸುಮಾರು 600 ಮಂದಿ ನೌಕರರ ಕೆಲಸಕ್ಕೆ ವಿಪ್ರೊ ಕೊಕ್

Sumana Upadhyaya

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಲವು ಎಡರು ತೊಡರುಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ದೇಶದ ಮೂರನೆ ಅತಿದೊಡ್ಡ ಸಾಫ್ಟ್ ವೇರ್ ಕಂಪೆನಿ ವಿಪ್ರೊ ನೌಕರರ ಸಂಖ್ಯೆಯನ್ನು ಕಡಿತಗೊಳಿಸುತ್ತಿದೆ.ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ವಿಪ್ರೊ ತನ್ನ ವಾರ್ಷಿಕ ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಸುಮಾರು 600 ಮಂದಿ ನೌಕರರನ್ನು ತೆಗೆದುಹಾಕಿದೆ. ಇದು 2,000ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಂಸ್ಥೆಯ ವ್ಯಾಪಾರ ವಹಿವಾಟಿನ ಉದ್ದೇಶಗಳು, ಕಾರ್ಯತಂತ್ರ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ನೋಡಿಕೊಂಡು ವಿಪ್ರೋ ತನ್ನ ಸಿಬ್ಬಂದಿಯ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ವಿಪ್ರೋ ಹೇಳಿಕೆಯಲ್ಲಿ ತಿಳಿಸಿದೆ. ಎಷ್ಟು ಮಂದಿಗೆ ಕಂಪೆನಿಯ ಕೆಲಸ ಬಿಡಲು ಹೇಳಲಾಗಿದೆ ಎಂದು ಅದು ತಿಳಿಸಿಲ್ಲ.

ಬೆಂಗಳೂರು ಮೂಲದ ವಿಪ್ರೋ ಕಂಪೆನಿಯಲ್ಲಿ ಕಳೆದ ವರ್ಷದ ಅಂತ್ಯಕ್ಕೆ 1.79 ಲಕ್ಷ ನೌಕರರಿದ್ದರು.

SCROLL FOR NEXT