ಜುಲೈ ನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಐಡಿಯಾ, ವೊಡಾಫೋನ್ 
ವಾಣಿಜ್ಯ

ಜುಲೈ ನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಐಡಿಯಾ, ವೊಡಾಫೋನ್

ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಸೇರಿದಂತೆ ನಾಲ್ಕು ಖಾಸಗಿ ಟೆಲಿಕಾಂ ಸಂಸ್ಥೆಗಳು 2017 ರ ಜುಲೈನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.

ಹೊಸದಿಲ್ಲಿ: ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಸೇರಿದಂತೆ ನಾಲ್ಕು ಖಾಸಗಿ ಟೆಲಿಕಾಂ ಸಂಸ್ಥೆಗಳು 2017 ರ ಜುಲೈನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ. ಭಾರತಿ ಏರ್ಟೆಲ್ ಕಂಪನಿಯು 6 ಲಕ್ಷ ಹೊಸ ಬಳಕೆದಾರರನ್ನು ಸೇರ್ಪಡೆ ಮಾಡಿಕೊಂಡಿದೆ.
ಏರ್ ಸೆಲ್ ಮತ್ತು ಟೆಲಿನಾರ್ ಸೇರಿದಂತೆ ಐದು ಸಿಓಎಐ ಸದಸ್ಯರ ಒಟ್ಟು ಮೊಬೈಲ್ ಸಂಸ್ಥೆಗಳು 83 ಕೋಟಿ ರೂ. ನಿಂದ 82.6 ಕೋಟಿ ರೂ. ಗೆ ಆದಾಯ ಕುಸಿತ ಕಂಡಿದ್ದಾರೆ. "ಪ್ರಸ್ತುತ ಉದ್ಯಮವು ಅನುಭವಿಸುತ್ತಿರುವ ತೀವ್ರ ಆರ್ಥಿಕ ಒತ್ತಡವು ಈ ಸಂಖ್ಯೆಗಳ ಮೇಲೆ ಪರಿಣಾಮವನ್ನು ಬೀರಿದೆ.
ಈ ಉದ್ಯಮವು ಅತಿಯಾದ ಪೈಪೋಟಿಯಲ್ಲಿದೆ ಮತ್ತು ಈ ಸಮಯದಲ್ಲಿ 4.5 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ ಎಂದು ಸಿಓಎಐ ನಿರ್ದೇಶಕ ರಾಜನ್ ಎಸ್ ಮ್ಯಾಥ್ಯೂಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೂಲಭೂತ ಸೌಕರ್ಯಕ್ಕಾಗಿ ರೋಲ್-ಔಟ್ ಮತ್ತು ವಿಸ್ತರಣೆಗೆ 2.5 ಲಕ್ಷ ಕೋಟಿ ರೂ.ಬೇಕಿದೆ ವಿಶೇಷವಾಗಿ ದೇಶದ ದೂರದ ಪ್ರದೇಶಗಳಲ್ಲಿ ಇದರ ಅಗತ್ಯವಿದೆ.
ಭಾರ್ತಿ ಏರ್ ಟೆಲ್ ನ ಚಂದಾದಾರರ ಸಂಖ್ಯೆ ಜುಲೈನಲ್ಲಿ 28.12 ಕೋಟಿ ತಲುಪಿದೆ. ಐಡಿಯಾ 23 ತಿಂಗಳಲ್ಲಿ 23 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು, 13.89 ಲಕ್ಷ ಗ್ರಾಹಕರನ್ನು ವೊಡಾಫೋನ್ ಕಳೆದುಕೊಂಡಿದೆ. ಏರ್ ಸೆಲ್ 3.91 ಲಕ್ಷ ಮತ್ತು ಟೆಲಿನಾರ್ 2.75 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶ (ಪೂರ್ವ) ವಲಯವು 8.41 ಕೋಟಿ ಚಂದಾದಾರರನ್ನು ಹೊಂದಿದೆ. ಮಹಾರಾಷ್ಟ್ರ ವಲಯವು ಒಟ್ಟು 7.87 ಕೋಟಿ ಚಂದಾದಾರರನ್ನು ಹೊಂದಿದೆ.
ಒಟ್ಟು 7.62 ಕೋಟಿ ಗ್ರಾಹಕರೊಂದಿಗೆ ಬಿಹಾರವು ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ್ (ಪೂರ್ವ) ಕ್ರಮವಾಗಿ 5.1 ಲಕ್ಷ ಮತ್ತು 4.7 ಲಕ್ಷ ಹೊಸ ಚಂದಾದಾರರೊಂದಿಗೆ ಉತ್ತಮ ಸಾಮರ್ಥ್ಯ ತೋರಿವೆ ಎನ್ನಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT