ವಾಣಿಜ್ಯ

ಉದಯ ಸುದ್ದಿವಾಹಿನಿ ಮುಚ್ಚಲು ಸನ್‌ ಟಿವಿ ನೆಟ್‌ವರ್ಕ್‌ ನಿರ್ಧಾರ: ಅಕ್ಟೋಬರ್ 24ರಿಂದ ಸ್ಥಗಿತ

Shilpa D
ಬೆಂಗಳೂರು: ಉದಯ ಸುದ್ದಿ ವಾಹಿನಿ’ ಮುಚ್ಚಲು ಸನ್‌ ಟಿವಿ ನೆಟ್‌ವರ್ಕ್‌ ನಿರ್ಧರಿಸಿದೆ.ಈ ಸಂಬಂಧ ಕಾರ್ಮಿಕ ಇಲಾಖೆಗೆ ಪತ್ರ ಬರೆದಿರುವ ಸನ್‌ ಟಿವಿ ಉಪಾಧ್ಯಕ್ಷ ಎಸ್.ಡಿ. ಜವಾಹರ್‌ ಮೈಕಲ್‌,  ಅಕ್ಟೋಬರ್‌ 24 ರಿಂದ ಉದಯ ನ್ಯೂಸ್‌ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ 19 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ, ಈ ಸುದ್ದಿವಾಹಿನಿಯ 73 ಸಿಬ್ಬಂದಿಯ ಸೇವೆಯನ್ನು ಕೊನೆಗೊಳಿಸಲಾಗುವುದು. ಸುದ್ದಿ ವಾಹಿನಿಗೆ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೂ ಕಳೆದ ಕೆಲವು ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ. ವೀಕ್ಷಕರ ಸಂಖ್ಯೆಯೂ ಕಡಿಮೆ ಇದೆ. ಇವೆಲ್ಲ ಕಾರಣಗಳಿಂದಾಗಿ ಸುದ್ದಿ ಚಾನಲ್‌ ಮುಚ್ಚಲು ತೀರ್ಮಾನಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಸುದ್ದಿ ವಾಹಿನಿಗಳ ಸ್ಪರ್ಧೆಯ ಅಬ್ಬರದಲ್ಲಿ ಉದಯ ಸುದ್ದಿ ವಾಹಿನಿ ಭಾರೀ ನಷ್ಟ ಅನುಭವಿಸಿದೆ. ಹೀಗಾಗಿ ನ್ಯೂಸ್ ಚಾನೆಲ್ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ.
ವರನಟ ಡಾ. ರಾಜ್ ಕುಮಾರ್ ಅಪರಹಣದ ಸಮಯದಲ್ಲಿ ಆರಂಭವಾದ ಸುದ್ದಿ ವಾಹಿನಿ ಹಲವು ವರ್ಶಗಳ ಕಾಲ ಅನಭಿಷಕ್ತ ದೊರೆಯಂತೆ ಮೆರೆಯಿತು, ಆದರೆ ನಂತರದ ದಿನಗಳಲ್ಲಿ ಎದುರಾದ ಇತರ ಖಾಸಗಿ ಚಾನೆಲ್ ಗಳ ಸ್ಪರ್ಧೆಯಿಂದ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. 
SCROLL FOR NEXT