ತಿರುಪತಿ: ಶ್ರೀಮಂತ ದೇವರಾದ ವೆಂಕಟರಮಣ ತನ್ನ ಚಿನ್ನವನ್ನು ಈಗ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ್ದಾನೆ!. ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಮಂಡಳಿ 2,780 ಕೆ.ಜಿ. ತೂಕದ ಚಿನ್ನವನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ದೀರ್ಘಾವಧಿ ಠೇವಣಿ ಇರಿಸಿದೆ.
ಅಮರಾವತಿ ಸರ್ಕಲ್ ಎಸ್ ಬಿಐನ ಶಾಖೆಯಲ್ಲಿ ತಿರುಪತಿ ತಿಮ್ಮಪ್ಪನ 2,780 ಕೆ.ಜಿ. ಚಿನ್ನ ಠೇವಣಿ ಇಡಲಾಗಿದೆ. ಠೇವಣಿಗೆ ಸಂಬಂಧಿಸಿದಂತೆ ಎಸ್ ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಮಣಿ ಪಲ್ವೇಸನ್ ಟಿಟಿಡಿ ಆರ್ಥಿಕ ಸಲಹೆಗಾರ ಮತ್ತು ಮುಖ್ಯ ಲೆಕ್ಕಾಧಿಕಾರಿ ಒ.ಬಾಲಾಜಿ ಅವರಿಗೆ ಪ್ರಮಾಣ ಪತ್ರ ಹಸ್ತಾಂತರಿಸಿದ್ದಾರೆ.
12 ವರ್ಷಗಳ ದೀರ್ಘಾವಧಿ ರೇವಣಿ ಯೋಜನೆ ಇದಾಗಿದ್ದು ಇದಕ್ಕಾಗಿ ಟಿಟಿಡಿ ಶೇ 2.5 ರಷ್ಟು ಬಡ್ಡಿ ಪಡೆಯಲಿದೆ.