ಹೊಸದಿಲ್ಲಿ: ಅಪನಗದಿಕರಣ ಕಾರಣ ದೇಶದ ಆರ್ಥಿಕತೆ ಉತ್ತಮ ದಿಕ್ಕಿನತ್ತ ಸಾಗುತ್ತಿದೆ, ಆರ್ಥಿಕತೆಗೆ ಇದರಿಂದ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬಹುತೇಕ ರದ್ದಾದ ನೋಟುಗಳು ಬ್ಯಾಂಕ್ ಗೆ ಮರಳಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದ ಒಂದು ದಿನದ ನಂತರ, ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ. ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲಾಗಿದೆ ಎಂದ ಮಾತ್ರಕ್ಕೆ ಎಲ್ಲಾ ಹಣವೂ ನ್ಯಾಯಸಮ್ಮತ ಹಣವಾಗಿಲ್ಲ.
"ಅಪನಗದಿಕರಣದ ನಂತರ ಕಪ್ಪು ಹಣವನ್ನು ಸಂಪೂರ್ಣವಾಗಿ ನಾಶಗೊಳಿಸಲಾಗಿದೆ ಎಂದು ಯಾರೂ ಹೇಳುತ್ತಿಲ್ಲ" ಎಂದು ಅವರು ಹೇಳಿದರು.
ಅವರು ಜಿಎಸ್ಟಿ ಜತೆಗೂಡಿ ಅಪನಗದಿಕರಣ ಕಾರಣ ತೆರಿಗೆಯ ಆದಾಯಕ್ಕೆ "ಮಹತ್ವದ ಹೆಚ್ಚಳ" ವನ್ನು ನೀಡಿದೆ, ಏಕೆಂದರೆ ಅನೇಕ ಜನರು ತೆರಿಗೆ ಪಾವತಿದಾರರ ವ್ಯಾಪ್ತಿಯಲ್ಲಿ ಬಂದಿದ್ದಾರೆ ಎಂದರು. ಬ್ಯಾಂಕುಗಳಲ್ಲಿ ಅಗಾಧ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದರೂ, ಸರ್ಕಾರದ ಕಾಳಜಿ ಇದಾಗಿಲ್ಲ. ಇದೀಗ ಹೆಚ್ಚಿನ ಪ್ರಮಾಣದ ಹಣವು ಫಾರ್ಮಲ್ ಸಿಸ್ಟಮ್ ಮೂಲಕ ಅರ್ಥವ್ಯವಸ್ಥೆಗೆ ಇಳಿದಿದೆ.
"ಅಪನಗದಿಕರಣ ಪರಿಣಾಮವು ಭವಿಷ್ಯದ ಬೆಳವಣಿಗೆಯಲ್ಲಿದೆ... ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಮಾಡಿದ ಮಾತ್ರಕ್ಕೆ ಅದು ನ್ಯಾಯಸಮ್ಮತ ಹಣವಾಗುವುದಿಲ್ಲ" ಎಂದು ಅವರು ಹೇಳಿದರು, ರಾಜಕೀಯ ಪ್ರತಿರೋಧವಿದ್ದರೂ ಸಹ ದೇಶವು ಅಪನಗದಿಕರಣಕ್ಕೆ ಸಿದ್ದವಾಗಿತ್ತು.
ಆರ್ ಬಿಐ ನಿನ್ನೆ ತನ್ನ ಹೇಳಿಕೆಯಲ್ಲಿ ಅಪನಗದಿಕರಣದಿಂದ ಕರೆನ್ಸಿಯ ಶೇ. 99 ರಷ್ಟು ಹಣ (ಸುಮಾರು 15.44 ಲಕ್ಷ ಕೋಟಿ ರೂ.) ಬ್ಯಾಂಕ್ ಗೆ ಸಂದಾಯವಾಗಿದೆ ಎಂದಿತ್ತು.