ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಜನವರಿಯಿಂದ ತನ್ನ ಗ್ರಾಹಕರಿಗೆ ಆಧಾರ್ ಕಡ್ಡಾಯಗೊಳಿಸಿದ ಬಿಎಸ್ಇ

ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ ಇ) ಅಕ್ರಮ ಹಣ ವಹಿವಾಟು ತಡೆ ನಿಯಮಗಳ ಅನುಸಾರ ವೈಯಕ್ತಿಕ ಗ್ರಾಹಕರಿಗೆ ಕಡ್ಡಾಯವಾಗಿ....

ಸಾಂದರ್ಭಿಕ ಚಿತ್ರ
Lingaraj Badiger
Updated On : 12 Dec 2017, 7:27 am
ಮುಂಬೈ: ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ ಇ) ಅಕ್ರಮ ಹಣ ವಹಿವಾಟು ತಡೆ ನಿಯಮಗಳ ಅನುಸಾರ ವೈಯಕ್ತಿಕ ಗ್ರಾಹಕರಿಗೆ ಕಡ್ಡಾಯವಾಗಿ ಆಧಾರ್ ವಿವರ ನೀಡುವಂತೆ ಸೂಚಿಸಿ ಎಂದು ಮಂಗಳವಾರ ಸ್ವತ್ತು ನಿರ್ವಹಣಾ ಕಂಪೆನಿ(ಎಎಂಸಿ)ಗಳಿಗೆ ಆದೇಶಿಸಿದೆ.
ಕಳೆದ ಜೂನ್ ಕೇಂದ್ರ ಸರ್ಕಾರ ಅಕ್ರಮ ಹಣ ವಹಿವಾಟು ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಗ್ರಾಹಕರಿಂದ ಆಧಾರ್ ಸಂಖ್ಯೆ ಸಂಗ್ರಹಿಸುವಂತೆ ಬಿಎಸ್ ಇ ಸೂಚನೆ ನೀಡಿದೆ.
ಜನವರಿ 1, 2018ರಿಂದ ಜಾರಿಗೆ ಬರುವಂತೆ ಗ್ರಾಹಕನು ಒಬ್ಬ ವ್ಯಕ್ತಿಯಾಗಿದ್ದರೆ ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಒಂದು ವೇಳೆ ಆಧಾರ್ ಹೊಂದಿರದಿದ್ದರೆ, ಗ್ರಾಹಕರು ಆಧಾರ್ ನೋಂದಣಿಗೆ ಅರ್ಜಿ ಸಲ್ಲಿಸಿದ ಪುರಾವೆ ಒದಗಿಸಬೇಕು ಎಂದು ಬಿಎಸ್ ಇ ಅಧಿಸೂಚನೆ ಹೊರಡಿಸಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement