ನವದೆಹಲಿ: ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.4.88 ಅಂದರೆ ಬಹುತೇಕ ಶೇ.5 ಕ್ಕೆ ಏರಿಕೆಯಾಗಿದ್ದು, 15 ತಿಂಗಳಲ್ಲೇ ದಾಖಲೆಯ ಏರಿಕೆ ಇದಾಗಿದೆ.
ಕಳೆದ ತಿಂಗಳಲ್ಲಿ ತರಕಾರಿ, ಮೊಟ್ಟೆ, ಇಂಧನ ದರ ಏರಿಕೆಯಾಗಿದ್ದರಿಂದ ಹಣಾದುಬ್ಬರ ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅಕ್ಟೋಬರ್ ತಿಂಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ.3.58 ರಷ್ಟಿತ್ತು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ.3.63 ರಷ್ಟಿತ್ತು, 2016 ರ ಆಗಸ್ಟ್ ತಿಂಗಳಲ್ಲಿ ಶೇ.5.05 ರಷ್ಟಿತ್ತು.