ವಾಣಿಜ್ಯ

ಇನ್ನು ಮೊಬೈಲ್, ಟಿವಿ ದುಬಾರಿ; ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳ ನಿರ್ಧಾರ!

Vishwanath S
ನವದೆಹಲಿ: ಮೇಕ್ ಇನ್ ಇಂಡಿಯಾ ಎಲೆಕ್ಟಾನಿಕ್ಸ್ ಸರಕುಗಳ ಮಾರಾಟವನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳಲಾದ ಮೊಬೈಲ್ ಫೋನ್, ಟಿವಿ, ಸಿಸಿಟಿವಿ ಸೇರಿದಂತೆ 10 ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಪ್ರಕಟಣೆಯೊಂದು ತಿಳಿಸಿದೆ. 
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಿಯ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಮೇಕ್ ಇನ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದ್ದರು. ಇದೀಗ ಕೇಂದ್ರ ಸರ್ಕಾರದ ಆಮದು ವಸ್ತುಗಳ ಮೇಲಿನ ಸುಂಕ ಹೆಚ್ಚಳದ ಈ ನಿರ್ಧಾರ ಸಾಗರೋತ್ತರ ಆಮದು ವ್ಯವಹಾರವನ್ನು ನಿಗ್ರಹಿಸಿ, ದೇಶೀಯ ಉದ್ಯಮವನ್ನು ಸದೃಢಗೊಳಿಸುವ ಸಾಧ್ಯವಾಗಲಿದೆ. 
2019ರ ವೇಳೆಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲಿ 500 ಮಿಲಿಯನ್ ಮೊಬೈಲ್ ಫೋನ್ ಗಳನ್ನು ತಯಾರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು ಈ ವರ್ಷದಲ್ಲಿ ಸುಮಾರು 290 ಮಿಲಿಯನ್ ಮೊಬೈಲ್ ಗಳನ್ನು ತಯಾರಿಸುವ ಗುರಿ ಇದೆ. ಇದೀಗ ಆಮದು ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳದಿಂದಾಗಿ ದೇಶಿಯ ಉತ್ಪಾದಕರಿಗೆ ಪ್ರಯೋಜನವಾಗಲಿದೆ. 
ಆಮದು ತೆರಿಗೆ ಹೆಚ್ಚಳದಿಂದ ದೇಶೀಯ ಉತ್ಪಾದನೆಯ ಪ್ರಮಾಣ ಹೆಚ್ಚಳವಾಗಲಿದೆ ಎಂದು ಭಾರತೀಯ ಸೆಲ್ಯುಲಾರ್ ಅಸೋಸಿಯೇಷನ್ ಅಧ್ಯಕ್ಷ ಪಂಕಜ್ ಮಹಿಂದ್ರೋ ಅವರು ಹೇಳಿದ್ದಾರೆ. 
ಮೇಕ್ರೋವೆವ್ ಓವೆನ್ಸ್ ನಂತರ ಉತ್ಪನ್ನಗಳ ಆಮದು ತೆರಿಗೆ ಶುಲ್ಕವನ್ನು ಶೇಕಡ 10ರಿಂದ 20ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇದರಿಂದ ದೇಶೀಯ ಉತ್ಪಾದನೆ ಹೆಚ್ಚಾಗಳಿದೆ ಎಂದು ಉದ್ಯಮಿ ಕಮಲ್ ನಂದಿ ಹೇಳಿದ್ದಾರೆ.
SCROLL FOR NEXT