ಮುಂಬೈ: ಬಹು ರಾಷ್ಟ್ರೀಯ ಕಂಪನಿಗಳಿಗೆ ಸಡ್ಡು ಹೊಡೆಯುವ ಮಟ್ಟಿಗೆ ಯಶಸ್ವಿಯಾಗಿ ಬೆಳೆದಿರುವ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪನಿಯು ಈಗ ಡಯಾಪರ್ ಮತ್ತು ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕೆಗೆ ಮುಂದಾಗಿದೆ.
ಪತಂಜಲಿ ವಕ್ತಾರರ ಎಸ್ ಕೆ ಗುಪ್ತಾ ತಿಜಾರವಾಲ ಅವರ ಪ್ರಕಾರ, ಪತಂಜಲಿ ಆಯುರ್ವೇದ ಕಂಪನಿಯು ಮಕ್ಕಳ ಮತ್ತು ವಯಸ್ಕರ ಡಯಾಪರ್ ಹಾಗೂ ನ್ಯಾಪ್ಕಿನ್ ಮಾರುಕಟ್ಟೆಯಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ 16 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡುತ್ತಿದೆ.
ಇತ್ತೀಚಿಗಷ್ಟೇ ಫೋರ್ಬ್ಸ್ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಕಂಪನಿಗಳ ಪೈಕಿ ಪತಂಜಲಿ ಆಯುರ್ವೇದ ಕಂಪನಿಯು 19ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಪತಂಜಲಿ ಆಯುರ್ವೇದ ಕಂಪನಿಯು 45ನೇ ಸ್ಥಾನದಲ್ಲಿತ್ತು.