ವಾಣಿಜ್ಯ

ಆಮದು ಸುಂಕ ಹೆಚ್ಚಳ: ಅಸಂಘಟಿತ ಟಿವಿ, ಮೊಬೈಲ್ ಫೋನ್ ಸಂಸ್ಥೆಗಳ ಮೇಲೆ ಹೆಚ್ಚಿನ ಪರಿಣಾಮ

Srinivas Rao BV
ನವದೆಹಲಿ: ಆಮದು ಮಾಡಿಕೊಳ್ಳುವ ಮೊಬೈಲ್ ಫೋನ್ ಗಳು ಟಿವಿ ಸೆಟ್ ಎಲ್ಇಡಿ ಲ್ಯಾಂಪ್ ಗಳ ಮೇಲಿನ ಕಸ್ಟಮ್ಸ್ ತೆರಿಗೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಕಸ್ಟಮ್ಸ್ ತೆರಿಗೆ ಹೆಚ್ಚಿಸಿರುವುದರಿಂದ ಕಸ್ಟಮರ್ ಡ್ಯುರೆಬಲ್ ಗೂಡ್ಸ್ ಸೆಗ್ಮೆಂಟ್ ನಿಂದ ಅಸಂಘಟಿತ ಸಂಸ್ಥೆಗಳ ನಿರ್ಗಮನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಆಮದು ಸುಂಕ ಹೆಚ್ಚಿಸಿರುವುದರಿಂದ ಎಲ್ಇಡಿ ಲ್ಯಾಂಪ್ ಗಳ ಅಗತ್ಯತೆಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಸಂಸ್ಥೆಗಳಿಗೆ ಹೆಚ್ಚಿನ ಪರಿಣಾಮ ಬೀರಲಿದೆ. ಇದು ಮುಂದಿನ ಹಂತದಲ್ಲಿ, ಚೀನಾದಿಂದ ಅಗ್ಗದ ಎಲ್ ಇಡಿ ಲ್ಯಾಂಪ್ ಹಾಗೂ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಅಸಂಘಟಿತ ಅಥವಾ ಬ್ರಾಂಡೆಡ್ ಅಲ್ಲದ ಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಅಂತಹ ಸಂಸ್ಥೆಗಳು ನಿರ್ಗಮನವಾಗಲಿವೆ ಎಂದು ಲೈಟಿಂಗ್, ಓರಿಯಂಟ್ ಎಲೆಕ್ಟ್ರಿಕ್ ನ ಉಪಾಧ್ಯಕ್ಷ ಪುನೀತ್ ಧವನ್ ತಿಳಿಸಿದ್ದಾರೆ. 
ಉಪಕರಣಗಳನ್ನು ಶೇ.95 ರಷ್ಟು ದೇಶೀ ಉತ್ಪಾದನೆ ಮಾಡುವ ಸಂಸ್ಥೆಗಳಿಗೆ ಈ ಆಮದು ಸುಂಕ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪುನೀತ್ ಧವನ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚುತ್ತಿರುವ ಆಮದು ಪ್ರಮಾಣವನ್ನು ತಡೆಗಟ್ಟಲು ಹಣಕಾಸು ಇಲಾಖೆ ಆಮದು ಉತ್ಪನ್ನಗಳ ಮೇಲಿನ ಬೇಸಿಕ್ ಕಸ್ಟಮ್ಸ್ ಸುಂಕವನ್ನು ನ.15 ರಂದು ಹೆಚ್ಚಿಸಿತ್ತು. 
SCROLL FOR NEXT