ವಾಣಿಜ್ಯ

ಕುಸಿತದ ಹೊರತಾಗಿಯೂ ಭಾರತದ ಜಿಡಿಪಿ ಪುಟಿದೇಳಲಿದೆ: ಆರ್ ಬಿಐ ಗೌರ್ನರ್

Srinivas Rao BV
ನವದೆಹಲಿ: ನೋಟು ನಿಷೇಧದಿಂದ ಜಿಡಿಪಿ ದರ ತಾತ್ಕಾಲಿಕವಾಗಿ ಕುಸಿದಿದ್ದರೂ ಮುಂದಿನ ದಿನಗಳಲ್ಲಿ ಪುಟಿದೇಳಲಿದೆ ಎಂದು ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಖಾಸಗಿ ಸುದಿ ವಾಹಿನಿಯಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಉರ್ಜಿತ್ ಪಟೇಲ್, 500, 1000 ರೂ ನೋಟು ನಿಷೇಧ ಭಾರತದ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಿರುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ 2017-18 ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಪುಟಿದೇಳಲಿದೆ ಎಂದು ಹೇಳಿದ್ದಾರೆ. 
500, 1000 ರೂ ನೋಟು ನಿಷೇಧ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ನಡೆದಿದೆ, ಅದು ನೋಟು ನಿಷೇಧ ಯೋಜನೆಯೂ ಆಗಿತ್ತು ಎಂದು ಉರ್ಜಿತ್ ಪಟೇಲ್ ತಿಳಿಸಿದ್ದಾರೆ. ಕಳೆದ ವಾರ ಪ್ರಸಕ್ತ ಆರ್ಥಿಕ ವರ್ಷದ ಬೆಳವಣಿಗೆಯನ್ನು ಆರ್ ಬಿಐ ಶೇ.7.1 ರಿಂದ ಶೇ.6.9 ಕ್ಕೆ ಇಳಿಸಿತ್ತು. ಆದರೆ 2017-18 ನೇ ಸಾಲಿನಲ್ಲಿ ಶೇ.7.4 ಕ್ಕೆ ಏರಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿತ್ತು. 
SCROLL FOR NEXT