ವಾಣಿಜ್ಯ

ಭಾರತದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆ: ಒಟ್ಟು ಸಂಪತ್ತಿನ ಶೇಕಡಾ 58 ಭಾಗ ಶ್ರೀಮಂತರ ಬಳಿ ಸಂಗ್ರಹ

Sumana Upadhyaya
ಡೆವೊಸ್: ಭಾರತ ಸೇರಿದಂತೆ ವಿಶ್ವದಲ್ಲಿ ಆದಾಯದ ಅಸಮಾನತೆ ಹೆಚ್ಚಾಗುತ್ತಿರುವ ಸೂಚನೆ ಪ್ರಬಲವಾಗಿ ಕಂಡುಬರುತ್ತಿದೆ. ಭಾರತದ ಒಟ್ಟಾರೆ ಸಂಪತ್ತಿನ ಶೇಕಡಾ 58ರಷ್ಟನ್ನು ಶೇಕಡಾ 1ರಷ್ಟಿರುವ ಅತಿ ಶ್ರೀಮಂತರು ಹೊಂದಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಶೇಕಡಾ 50ರಷ್ಟಿದೆ ಎಂದು ಸೋಮವಾರ ಬಿಡುಗಡೆಯಾದ ಹಕ್ಕುಗಳ ಗುಂಪು ಆಕ್ಸಮ್ ದಾಖಲೆಗಳು ಹೇಳುತ್ತವೆ.
ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಅರ್ಧದಷ್ಟು ಬಡವರು ಹೊಂದಿರುವ ಒಟ್ಟಾರೆ ಸಂಪತ್ತಿಗೆ ಸಮನಾಗಿ ವಿಶ್ವದ 8 ಮಂದಿ ಹೊಂದಿದ್ದಾರೆ. ಅವರೆಲ್ಲರೂ ಪುರುಷರು ಎಂದು ಆಕ್ಸಮ್ ಹೇಳಿದೆ. ವಿಶ್ವ ಆರ್ಥಿಕ ವೇದಿಕೆ ಡೆವೊಸ್ ನಲ್ಲಿ ಆರಂಭವಾಗುವುದಕ್ಕೆ ಮುನ್ನ ಈ ವರದಿ ಹೊರಬಿದ್ದಿದೆ.
ಡೆವೊಸ್ ನಲ್ಲಿ ಈ ವಾರ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಅನೇಕ ಆಗರ್ಭ ಶ್ರೀಮಂತರು ಒಟ್ಟು ಸೇರಲಿದ್ದು, ಬಡವರು-ಶ್ರೀಮಂತರ ಮಧ್ಯೆ ಸಂಪತ್ತಿನ ಅಂತರ ಹೆಚ್ಚಾಗುತ್ತಿದೆ. ಚೀನಾ ಮತ್ತು ಭಾರತದ ಹೊಸ ವರದಿಗಳ ಪ್ರಕಾರ ಜಗತ್ತಿನ ಬಡವರ ಸಂಪತ್ತು ಹಿಂದೆಗಿಂತಲೂ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ 57 ಶತಕೋಟಿ ಜನರು 216 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ಭಾರತದಲ್ಲಿ 84 ಶತಕೋಟಿ ಜನರ ಒಟ್ಟಾರೆ ಸಂಪತ್ತಿನ ಮೌಲ್ಯ 248 ಶತಕೋಟಿ ಡಾಲರ್ ಇದೆ. ಮುಕೇಶ್ ಅಂಬಾನಿಯವರ ಸಂಪತ್ತಿನ ಮೌಲ್ಯ 9.3 ಶತಕೋಟಿ ಡಾಲರ್, ದಿಲೀಪ್ ಶಾಂಘ್ವಿ(16.7 ಶತಕೋಟಿ ಡಾಲರ್), ಅಜೀಂ ಪ್ರೇಮ್ ಜಿ(15 ಶತಕೋಟಿ ಡಾಲರ್)ಯವರಾಗಿದ್ದಾರೆ. ಭಾರತದ ಒಟ್ಟಾರೆ ಸಂಪತ್ತಿನ ಮೌಲ್ಯ 3.1 ಟ್ರಿಲಿಯನ್ ಡಾಲರ್ ಆಗಿದೆ.
ಪ್ರಸಕ್ತ ವರ್ಷ ಜಗತ್ತಿನ ಒಟ್ಟು ಸಂಪತ್ತಿನ ಮೌಲ್ಯ 255.7 ಟ್ರಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ 6.5 ಟ್ರಿಲಿಯನ್ ಡಾಲರ್ ನ್ನು ಶತಕೋಟಿದಾರರು ಹೊಂದಿದ್ದಾರೆ. ಬಿಲ್ ಗೇಟ್ಸ್ ಅವರ ಸಂಪತ್ತಿನ ಮೌಲ್ಯ 75 ಶತಕೋಟಿ ಡಾಲರ್, ಅಮಂಕಿಯೊ ಒರ್ಟೆಗಾ(67 ಶತಕೋಟಿ ಡಾಲರ್) ಮತ್ತು ವಾರ್ರನ್ ಬಫೆಟ್(60.8 ಶತಕೋಟಿ ಡಾಲರ್) ಆಗಿದೆ ಎಂದು ವರದಿ ಹೇಳುತ್ತದೆ.
ಬಡವ-ಶ್ರೀಮಂತರ ಅಂತರವು ಅತ್ಯಂತ ಕೆಟ್ಟದಾಗಿದೆ ಎಂದು ಬಣ್ಣಿಸಿರುವ ಆಕ್ಸಮ್, ಇದಕ್ಕೂ ಮುನ್ನ ಹೊಸ ದಾಖಲೆಗಳು ಬಹಿರಂಗವಾಗುತ್ತಿದ್ದರೆ 2016ರಲ್ಲಿ ಜಗತ್ತಿನ 3.6 ಶತಕೋಟಿ ಜನರು ಹೊಂದಿದ್ದ ಒಟ್ಟು ಸಂಪತ್ತಿನ ಮೌಲ್ಯದಷ್ಟು ಸಂಪತ್ತು ಕೇವಲ 9 ಜನ ಹೊಂದಿದ್ದರು.
ಶೇಕಡಾ 99ಕ್ಕೆ ಆರ್ಥಿಕತೆ ಎಂಬ ಶೀರ್ಷಿಕೆಯನ್ನು ಹೊಂದಿರುವ ವರದಿಯಲ್ಲಿ ದೇಶ, ಜಗತ್ತಿನ ಪ್ರತಿಯೊಬ್ಬ ನಾಗರಿಕರಿಗೂ ಪ್ರಯೋಜನವಾಗುವ ಮಾನವ ಆರ್ಥಿಕತೆಯನ್ನು ಸೃಷ್ಟಿಸಬೇಕೆ ಹೊರತು ಶ್ರೀಮಂತರಿಗೆ ಮಾತ್ರವಲ್ಲ ಎಂದು ಹೇಳಿದ್ದಾರೆ.
2015ರಿಂದೀಚೆಗೆ ಶೇಕಡಾ 1ರಷ್ಟು ಶ್ರೀಮಂತರು ಇತರರಿಗಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ. ಮುಂದಿನ 20 ವರ್ಷಗಳಲ್ಲಿ 500 ಜನರು ತಮ್ಮ ಮುಂದಿನ ಪೀಳಿಗೆಗೆ 2.1 ಟ್ರಿಲಿಯನ್ ಡಾಲರ್ ಸಂಪತ್ತನ್ನು ವರ್ಗಾಯಿಸಲಿದ್ದು ಅದು ಭಾರತದ ಒಟ್ಟು ಸರಾಸರಿ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿರುತ್ತದೆ ಎಂದು ಆಕ್ಸಮ್ ಹೇಳಿದೆ.
ತಾರತಮ್ಯ ನೀತಿ ಮತ್ತು ಕಡಿಮೆ ವೇತನಕ್ಕೆ ದುಡಿಯುತ್ತಿರುವುದರಿಂದ ಏಷ್ಯಾದ್ಯಂತ ಮಹಿಳೆಯರ ವೇತನ ಪುರುಷರಿಗಿಂತ ಕಡಿಮೆಯಿದ್ದು ಶೇಕಡಾ 70ರಿಂದ 90ರಷ್ಟಿದೆ. ಅದರಲ್ಲೂ ಭಾರತದಲ್ಲಿ ಇದರ ಪ್ರಮಾಣ ಶೇಕಡಾ 30ಕ್ಕಿಂತ ಹೆಚ್ಚಾಗಿದೆ. ಇಲ್ಲಿ ಮಹಿಳೆಯರು ಪುರುಷರಿಗಿಂತ ಶೇಕಡಾ 30ರಷ್ಟು ಕಡಿಮೆ ವೇತನ ಪಡೆಯುತ್ತಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ 2016-17ನೇ ಸಾ ಲಿನ ಜಾಗತಿಕ ವೇತನ ವರದಿ ತಿಳಿಸಿದೆ. 
SCROLL FOR NEXT