ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸರ್ವರಿಗೂ ಅಗತ್ಯ ಪೂರೈಸುತ್ತಿರುವ ಹೌಸಿಂಗ್ ಫೈನಾನ್ಸ್ ಕಂಪನಿ ಆಸ್ಪೈರ್ ಹೋಮ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ (ಎಎಚ್‍ಎಫ್‍ಸಿಎಲ್) ಇಂದು ಕರ್ನಾಟಕದಲ್ಲಿ ಕಚೇರಿ ಪ್ರಾರಂಭಿಸಿದೆ. ಕೆಳ ಮತ್ತು ಮಧ್ಯಮ ವರ್ಗದ ಜನರ (LMI) ಗೃಹ ಹಣಕಾಸು ಅಗತ್ಯ ಪೂರೈಸುವ ಗುರಿ ಹೊಂದಿದೆ ಈ ಸಂಸ್ಥೆ (ಎಎಚ್‍ಎಫ್‍ಸಿಎಲ್), ತನ್ನ ಬೆಂಗಳೂರು ಕಚೇರಿಯನ್ನು, ರಾಮಕೃಷ್ಣ ಲೇಔಟ್, ಪದ್ಮನಾಭನಗರ, ಬೆಂಗಳೂರು ಇಲ್ಲಿ ತೆರೆದಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಕಲಬುರಗಿ, ಬೆಳಗಾವಿ, ದಾವಣಗೆರೆ, ಹೊಸಪೇಟೆ ಮೊದಲಾದ ಕಡೆ ತಮ್ಮ ಕನಸಿನ ಮನೆ ಹೊಂದುವ ಆಶೆಯ ಹೊಂದಿರುವ ಗ್ರಾಹಕರಿಗೆ (ಎಲ್‍ಎಂಐ) ಮಾದಿರಿ ಮನೆ ತೋರುವ ಜೊತೆಗೆ ಹಣಕಾಸಿನ ನೆರವನ್ನು ಒದಗಿಸಲಿದೆ.
ಶ್ರೀ ಅನಿಲ್ ಸಚ್ಚಿದಾನಂದ ಎಂಡಿ ಮತ್ತು ಸಿಇಓ ಎಎಚ್‍ಎಫ್‍ಸಿಎಲ್ ಬೆಂಗಳೂರು ಶಾಖೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಸತೀಶ್ ಕೋಟಿಯಾನ್, ಇಓಓ, ಎಎಚ್‍ಎಫ್‍ಸಿಎಲ್, ಶ್ರೀ ಗಿರೀಶ್ ಭಟ್ಟ್, ಕರ್ನಾಟಕ ರಾಜ್ಯದ ಮುಖ್ಯಸ್ಥರು, ಎಎಚ್‍ಎಫ್‍ಸಿಎಲ್, ಹಾಗೂ ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಮೊದಲ ಚೆಕ್‍ನ್ನು (ಎಎಚ್‍ಎಫ್‍ಸಿಎಲ್)ನ ಮೊದಲ ಗ್ರಾಹಕರಿಗೆ ವಿತರಸಲಾಯಿತು.
ಸಚ್ಚಿದಾನಂದ ಮಾತನಾಡಿ, ಎಲ್ಲರಿಗೂ 2022 ವೇಳೆಗೆ ವಸತಿ ಕಲ್ಪಿಸುವ ತನ್ನ ಪ್ರಧಾನ್ ಮಂತ್ರಿ ಅವಾಜ್ ಯೋಜನೆಯಡಿ (PMAY), ಕೇಂದ್ರ ಸರ್ಕಾರ 90 ಮಿಲಿಯನ್ ಮನೆ ನಿರ್ಮಿಸುವ ಗುರಿ ಹೊಂದಿದೆ. ಪಿಎಂಎವೈ ಅಡಿ ಎಎಚ್‍ಎಫ್‍ಸಿಎಲ್ ಮೊದಲ ಹಣಕಾಸು ಸಂಸ್ಥೆಯಾಗಿ HFC ಸೇರಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುತ್ತಿದೆ. ಎಲ್ಲರಿಗೂ ಕೈಗೆಟಕುವ ಮತ್ತು ಅಗತ್ಯ ಪೂರೈಸುವ ಗೃಹ ಸಾಲದ ಕಂಪನಿಯಾಗಿರುವ ಇದು. 2022 ರ ವೇಳೆಗೆ ಎಲ್ಲರಿಗೂ ವಸತಿ ಯೋಜನೆಯಲ್ಲಿ ಅರ್ಥ ಪೂರ್ಣ ಪಾತ್ರ ವಹಿಸುವ ವಿಶ್ವಾಸ ಹೊಂದಿದೆ.
ಜಿಡಿಪಿ ಮಾರ್ಟಗೇಜ್ ಶೇಕಡವಾರು ಭಾರತದಲ್ಲಿ 9.2% ಇದು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಕಡಿಮೆ. ಕರ್ನಾಟಕದಲ್ಲಿ ಇದು ಇನ್ನೂ ಕಡಿಮೆ ಶೇ.8.1, ಅದರಿಂದಾಗಿ ಪರಿಣಾಮಕಾರಿಯಾಗಿ ವಸತಿ ಯೋಜನೆ ಪ್ರೋತ್ಸಾಹಿಸಲು ಸಾಧ್ಯ ಎಂದರು.
ಶ್ರೀ ಸತೀಶ್ ಕೋಟಿಯಾನ್ ಮಾತನಾಡಿ, ಎಎಚ್‍ಎಫ್‍ಸಿಎಲ್ ಪ್ರಸ್ತುತ ಹಣಕಾಸು ವರ್ಷದಲ್ಲಿ 750 ಗ್ರಾಹಕರಿಗೆ ಗೃಹ ಸಾಲ ವಿತರಿಸುವ ಗುರಿ ಹೊಂದಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇದು 5000 ಗ್ರಾಹಕರಿಗೆ ವಿಸ್ತರಿಸಲಾಗುವುದು. ಗ್ರಾಹಕರಿಗೆ ಸಮಸ್ಯೆ ಆಗದಂತೆ ಮಾಡಲು ಡಿಜಿಟಲ್ ಪ್ರಕ್ರಿಯೆ ಅಳವಡಿಸಲಾಗಿದೆ. ಸಾಲ ಅರ್ಜಿಯ ಪ್ರಕ್ರಿಯೆ ಸಮಯ ಕಡಿಮೆ ಆಗುತ್ತದೆ ಎಂದು ಹೇಳಿದರು.
ಕರ್ನಾಟಕ ಯೋಜನೆ ಕುರಿತಂತೆ ಮಾತನಾಡಿದ ಶ್ರೀ ಗಿರೀಶ್ ಭಟ್ಟ್, 25 ಲಕ್ಷ ರೂ. ತನಕ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಹೊಸದಾಗಿ ಮನೆ ಖರೀದಿಸಲು ಸಾಲ, ಮರು ಮಾರಾಟದ ಮನೆ ಖರೀದಿ ಸಾಲ, ನಿರ್ಮಾಣಕ್ಕೆ ಸಾಲ, ಕಾಂಪೊಸಿಟ್ ಸಾಲ/ಪ್ಲಾಟ್+ನಿರ್ಮಾಣ/ ಮನೆ ನವೀರಕಣಕ್ಕೆ ಸಾಲ, ವಿಸ್ತರಣೆ ಸಾಲ ನೀಡಲಾಗುವುದು.
ಅಗತ್ಯ ಇರುವವರಿಗೆ ಮಾಲಾ(ಒಂಐಂ)/ಮಹಿಳಾ ಆವಾಜ್ ಸಾಲ/ಸಹ ನೀಡಲಾಗುವುದು. ಇದು ಗೃಹ ಸಾಲವನ್ನು 2 ರಿಂದ 12 ಲಕ್ಷದ ತನಕ ಉದ್ಯೋಗಸ್ಥ ಮಹಿಳೆಯರಿಗೆ, ವೇತನ ಹಾಗೂ ಸ್ವ-ಉದ್ಯೋಗ, ಕನಸಿನ ಮನೆ ಖರೀದಿಸಲು ಸಲ ನೀಡಲಾಗುವುದು. ಈ ವಿನೂತನ ನಿಲುವಿನಿಂದ ಹೊಸತನದಿಂದ ಸಂಸ್ಥೆ ಟಯರ್ 11 & 111 ಕೇಂದ್ರ ತಲುಪಲು ಹಾಗೂ ಗೃಹ ಹಣಕಾಸಿನ ವಿಷಯದಲ್ಲಿ ವಿಭಿನ್ಯತೆ ತೋರಲು ಬದ್ಧವಾಗಿದೆ ಎಂದರು.