ವಾಣಿಜ್ಯ

ನೋಟು ಅಮಾನ್ಯ: ಸ್ಮಾರ್ಟ್ ಫೋನ್ ಮಾರಾಟದಲ್ಲಿ ಶೇ.30.5 ರಷ್ಟು ಕುಸಿತ

Srinivas Rao BV
ನವದೆಹಲಿ: ಕೇಂದ್ರ ಸರ್ಕಾರ ನ.8 ರಂದು ಘೋಷಿಸಿದ್ದ 500-1000 ರೂ ನೋಟು ಅಮಾನ್ಯದ ನಿರ್ಧಾರ ಸ್ಮಾರ್ಟ್ ಫೋನ್ ಮಾರಾಟದ ಮೇಲೂ ಪರಿಣಾಮ ಬೀರಿದ್ದು, ನವೆಂಬರ್-ಅಕ್ಟೋಬರ್ ತಿಂಗಳಲ್ಲಿ ಸ್ಮಾರ್ಟ್ ಫೋನ್ ಗಳ ಮಾರಾಟ ಶೇ.30 ರಷ್ಟು ಕುಸಿತ ಕಂಡಿದೆ. 
ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್(ಐಡಿಸಿ) ಈ ಬಗ್ಗೆ ವರದಿ ಪ್ರಕಟಿಸಿದ್ದು, ಚೀನಾ ಹಾಗೂ ಉಳಿದ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ನೋಟು ಅಮಾನ್ಯದ ನಿರ್ಧಾರದಿಂದ ಸ್ಮಾರ್ಟ್ ಫೋನ್ ಗಳ ಮಾರಾಟ ಶೇ.30 ರಷ್ಟು ಕುಸಿತ ಕಂಡಿದೆ ಎಂದು ಐಡಿಸಿ ಹೇಳಿದೆ. 
ನವೆಂಬರ್ ತಿಂಗಳಲ್ಲಿ ಚೀನಾದಲ್ಲಿ ಸ್ಮಾರ್ಟ್ ಫೋನ್ ಮಾರಾಟ ಶೇ.26.5 ರಷ್ಟು ಕುಸಿದಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಶೇ.30.5 ರಷ್ಟು ಕುಸಿತ ಕಂಡಿದೆ. ಆದರೆ ಭಾರತದಲ್ಲಿ ಮಾತ್ರ ಸ್ಮಾರ್ಟ್ ಫೋನ್ ಗಳ ಮಾರಾಟ ಶೇ.37.2 ರಷ್ಟು ಕುಸಿತ ಕಂಡಿದೆ. 
ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬಹುತೇಕ ಎಲ್ಲಾ ಸ್ತರಗಳಲ್ಲೂ ನೋಟು ನಿಷೇಧ ಪರಿಣಾಮ ಬೀರಿದ್ದು, ಸ್ಮಾರ್ಟ್ ಫೋನ್ ಗಳ ಬೇಡಿಕೆ ಸಹ ಕುಸಿದಿದೆ ಎಂದು ಮಾರುಕಟ್ಟೆ ವಿಶ್ಲೇಷಕರಾದ ಉಪಾಸನಾ ಜೋಷಿ ಹೇಳಿದ್ದಾರೆ. ಸ್ಮಾರ್ಟ್ ಫೋನ್ ಗಳ ಮಾರಾಟ ನವೆಂಬರ್-ಅಕ್ಟೋಬರ್ ತಿಂಗಳಲ್ಲಿ ಟೈರ್-1 ನಗರಗಳಲ್ಲಿ ಶೇ.31.7 ರಷ್ಟು, ಟೈರ್ 2,3,4 ನಗರಗಳಲ್ಲಿ ಶೇ.29.5 ರಷ್ಟು ಕುಸಿತ ಕಂಡಿದೆ. 
SCROLL FOR NEXT