ನವದೆಹಲಿ: ವಸತಿ ಕಟ್ಟಡಗಳ ಬಾಡಿಗೆಯಿಂದ ಬರುವ ಆದಾಯವನ್ನು ಜಿಎಸ್ ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ವಾಣಿಜ್ಯ ಉದ್ದೇಶಕ್ಕಾಗಿ ನೀಡುವ ಬಾಡಿಗೆಯಿಂದ ವಾರ್ಷಿಕವಾಗಿ ಬರುವ 20 ಲಕ್ಷ ರೂಪಾಯಿಕ್ಕೂ ಹೆಚ್ಚಿನ ಆದಾಯ ಜಿಎಸ್ ಟಿ ವ್ಯಾಪ್ತಿಗೆ ಒಳಪಡಲಿದೆ.
ಜಿಎಸ್ ಟಿ ಮಾಸ್ಟರ್ ಕ್ಲಾಸ್ ನಲ್ಲಿ ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಈ ಬಗ್ಗೆ ತಿಳಿಸಿದ್ದು, ವಾಣಿಜ್ಯ ಉದ್ದೇಶಕ್ಕಿಂತ ಹೊರತಾಗಿರುವ, ಮನೆ ಬಾಡಿಗೆಯಿಂದ ಬರುವ ಆದಾಯವನ್ನು ಜಿಎಸ್ ಟಿ ಯಿಂದ ಹೊರಗಿಡಲಾಗಿದೆ. ಆದರೆ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡಗಳನ್ನು ಬಾಡಿಗೆಗೆ ನೀಡಿ ವಾರ್ಷಿಕ 20 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಬಾಡಿಗೆ ಪಡೆದರೆ ಆ ಆದಾಯ ಜಿಎಸ್ ಟಿ ವ್ಯಾಪ್ತಿಗೆ ಬರಲಿದೆ ಎಂದು ಹೇಳಿದ್ದಾರೆ.
ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡಗಳನ್ನು ಬಾಡಿಗೆಗೆ ನೀಡಿರುವವರು ಜಿಎಸ್ ಟಿ ಜಾಲದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು, ಈಗಾಗಲೇ 69.32 ಲಕ್ಷ ನೋಂದಾಯಿತ ತೆರಿಗೆ ಹಾಗೂ ವ್ಯಾಟ್ ಪಾವತಿದಾರರನ್ನು ಜಿಎಸ್ ಟಿಎನ್ ಪೋರ್ಟಲ್ ಗೆ ವರ್ಗಾವಣೆ ಮಾಡಲಾಗಿದೆ ಎಂದು ಜಿಎಸ್ ಟಿಎನ್ ನ ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics