ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಹಳೆ ಚಿನ್ನಾಭರಣ, ವಾಹನ ಮಾರಾಟಕ್ಕೆ ಜಿಎಸ್'ಟಿ ಇಲ್ಲ: ಕೇಂದ್ರ ಸ್ಪಷ್ಟನೆ

ಹಳೆಯ ಚಿನ್ನಾಭರಣ ಮತ್ತು ಹಳೆಯ ವಾಹನಗಳ ಮಾರಾಟಕ್ಕೆ ಯಾವುದೇ ರೀತಿಯ ಜಿಎಸ್'ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ...

ಸಂಗ್ರಹ ಚಿತ್ರ
Manjula VN
Updated On : 14 Jul 2017, 11:04 am
ನವದೆಹಲಿ: ಹಳೆಯ ಚಿನ್ನಾಭರಣ ಮತ್ತು ಹಳೆಯ ವಾಹನಗಳ ಮಾರಾಟಕ್ಕೆ ಯಾವುದೇ ರೀತಿಯ ಜಿಎಸ್'ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. 
ಈ ಕುರಿತಂತೆ ಕಂದಾಯ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಅಧಿಯಾರ ಅವರು ಸ್ಪಷ್ಟನೆ ನೀಡಿದ್ದಾರೆ. ಆಭರಣ ವ್ಯಾಪಾರಿಗೆ ವ್ಯಕ್ತಿಯು ಹಳೆಯ ಚಿನ್ನ ಮಾರಾಟ ಮಾಡವುದು ಕಾಯ್ದೆಯ ಕಲಂ9(4)ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ತೆರಿಗೆ ಪಾವತಿಸಬೇಕಾಗಿಲ್ಲ. ಇದೇ ನೀತಿ ಹಳೆ ಕಾರು, ದ್ವಿಚಕ್ರ ವಾಹನ ಮಾರಾಟಕ್ಕೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. 
ಅಲ್ಲದೆ, ಫ್ಲ್ಯಾಟ್ ಗಳಲ್ಲಿ ನಿರ್ವಹಣಾ ವೆಚ್ಚವಾಗಿ ಹೌಸಿಂಗ್ ಸೊಸೈಟಿಗಳು ವಿಧಿಸುವ ಮಾಸಿಕ ಶುಲ್ಕ ರು.5 ಸಾವಿರ ಗಿಂತ ಕಡಿಮೆಯಿದ್ದಲ್ಲಿ ಮತ್ತು ವಾರ್ಷಿಕ ರು.20 ಲಕ್ಷಕ್ಕಿಂತ ಮೀರದ ವ್ಯವಹಾರ ನಡೆಸದಿದ್ದಲ್ಲಿ, ಜಿಎಸ್'ಟಿ ಪಾವತದಿಸುವ ಅಗತ್ಯವಿಲ್ಲವನೆಂದೂ ಸ್ಫಷ್ಟಪಡಿಸಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement