ಮನೆಯ ಅಲಂಕಾರವನ್ನು ಇನ್ನಷ್ಟು ಸುಂದರಗೊಳಿಸಲು ನವೀನ ವಿನ್ಯಾಸದ ಕಿಟಿಕಿ ಹಾಗೂ ಬಾಗಿಲುಗಳನ್ನು ವಿಂಡೋ ಮ್ಯಾಜಿಕ್ ಮಾರುಕಟ್ಟೆಗೆ ಪರಿಚಯಿಸಿದೆ.
ಈ ಉತ್ಪನ್ನಗಳ ವಿಶೇಷವೆಂದರೆ ಮನೆಯ ಮೇಲೆ ಬೀಳುವ ಅಪಾಯಕಾರಿ ಸೂರ್ಯನ ಕಿರಣಗಳನ್ನು ತಡೆಯಲಿವೆ. ಹಾಗೂ ಬೇಸಿಗೆ, ಮಳೆಗಾಲದಲ್ಲಿ ಬೀಳುವ ಕೆಟ್ಟ ಕಿರಣಗಳನ್ನು ತಡೆಯುವಂತಹ ಬಾಗಿಲುಗಳನ್ನು ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಪರಿಸರ ಸ್ನೇಹಿಯಾದ ಈ ಕಿಟಕಿ ಹಾಗೂ ಬಾಗಿಲುಗಳನ್ನು ಯುಪಿವಿಸಿ ತಂತ್ರಜ್ಞಾದಿಂದ ತಯಾರಿಸಲಾಗಿದ್ದು, ಬಣ್ಣ ಹೋಗದೆ ದೀರ್ಘ ಕಾಲ ಬಾಳಿಕೆ ಬರಲಿದೆ ಎಂದು ವಿಂಡೋಸ್ ಮ್ಯಾಜಿಕ್ ತಿಳಿಸಿದೆ.