ಸಂಗ್ರಹ ಚಿತ್ರ 
ವಾಣಿಜ್ಯ

ಯೂರೋ-4 ಎಫೆಕ್ಟ್: ಹಿಂದೂಸ್ತಾನ್ ಪೆಟ್ರೋಲಿಯಂನಿಂದ 61 ಸಾವಿರ ಕೋಟಿ ಹೂಡಿಕೆ!

ಪ್ರಸ್ತುತ ಚಾಲ್ತಿಯಲ್ಲಿರುವ ಯೂರೋ-4 ಮಾನದಂಡ ನಿರ್ವಹಣೆಗಾಗಿ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಕರಣಾ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ 61 ಸಾವಿರ ಕೋಟಿ ರು.ಹೂಡಿಕೆ ಮಾಡುತ್ತಿರುವುದಾಗಿ ಹೇಳಿದೆ.

ನವದೆಹಲಿ: ಪ್ರಸ್ತುತ ಚಾಲ್ತಿಯಲ್ಲಿರುವ ಯೂರೋ-4 ಮಾನದಂಡ ನಿರ್ವಹಣೆಗಾಗಿ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಕರಣಾ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ 61 ಸಾವಿರ ಕೋಟಿ ರು.ಹೂಡಿಕೆ  ಮಾಡುತ್ತಿರುವುದಾಗಿ ಹೇಳಿದೆ.

ತನ್ನ ಇಂಧನ ಸಂಸ್ಕರಣಾ ಘಟಕಗಳ ನವೀಕರಣ ಹಾಗೂ ಸಂಸ್ಕರಣಾ ಸಾಮರ್ಥ್ಯ ಹೆಚ್ಚಳಕ್ಕಾಗಿ ಮುಂದಿನ ನಾಲ್ಕು ವರ್ಷಗಳ ಅವದಿಯಲ್ಲಿ ಕ್ರಮೇಣ ಈ ಹಣವನ್ನು ವಿನಿಯೋಗಿಸಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು  ತಿಳಿಸಿದ್ದಾರೆ. ಮುಂಬೈ ಮತ್ತು ವಿಶಾಖಪಟ್ಟಣದಲ್ಲಿರುವ ಸಂಸ್ಥೆ ಸಂಸ್ಕರಣಾ ಘಟಕಗಳನ್ನು ಯೂರೋ-4 ಮಾನದಂಡಕ್ಕೆ ಅನುಗುಣವಾಗಿ ನವೀಕರಿಸುವುದು ಮತ್ತು ಅವುಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಈ ಬಂಡವಾಳ  ಹೂಡಿಕೆಯ ಪ್ರಮುಖ ಗುರಿಯಾಗಿದೆ.

ಆಂಧ್ರ ಪ್ರದೇಶದಲ್ಲಿರುವ ವಿಶಾಖ ಇಂಧನ ಸಂಸ್ಕರಣಾ ಘಟಕ ನವೀಕರಣಕ್ಕೆ 20,928 ಕೋಟಿ ಮೀಸಲಿರಸಲಾಗಿದ್ದು, ಇದರಿಂದ ಪ್ರತೀ ವರ್ಷ 8.33 ಮಿಲಿಯನ್ ಟನ್ ನಿಂದ 15 ಮಿಲಿಯನ್ ಟನ್ ಇಂಧನ ಸಂಸ್ಕರಣೆ ಮತ್ತು  ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜುಲೈ 2020ರ ಗಡುವು ನಿಗದಿ ಪಡಿಸಿಕೊಳ್ಳಲಾಗಿದೆ. ಅಂತೆಯೇ 4,199 ಕೋಟಿ ರು.ವೆಚ್ಚದಲ್ಲಿ ಮುಂಬೈ ಇಂಧನ ಸಂಸ್ಕರಣಾ ಘಟಕವನ್ನು ನವೀಕರಿಸಿ, ಈ ಘಟಕದಿಂದ  ಪ್ರತೀ ವರ್ಷ 9.5 ಮಿಲಿಯನ್ ಟನ್ ಇಂಧನ ಸಂಸ್ಕರಿಸಿ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಘಟಕದಲ್ಲಿ ಪ್ರಸ್ತುತ ವಾರ್ಷಿಕ 7.5 ಟನ್ ಇಂಧನವನ್ನು ಸಂಸ್ಕರಿಸಲಾಗುತ್ತಿದೆ.

ಬಂಡವಾಳ ಸಂಗ್ರಹಕ್ಕಾಗಿ ಯೋಜನೆ ರೂಪಿಸಿರುವ ಹೆಚ್ ಪಿಸಿಎಲ್ ಸಂಸ್ಥೆ ಸರ್ಕಾರದಿಂದ (ಒಎನ್ ಜಿಸಿ ಒಳಗೊಂಡಂತೆ) ಶೇ. 51.11ರಷ್ಟು ಹೂಡಿಕೆ, ಉಳಿದ ಹಣವನ್ನು ಸಾರ್ವಜನಿಕ ವಲಯದಿಂದ ಷೇರುಗಳ ಮೂಲಕ ಹೂಡಿಕೆ  ಮಾಡಲು ನಿರ್ಧರಿಸಿದೆ. ಸಂಸ್ಥೆಯ ಈ ಪ್ರಸ್ತಾಪಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಕೂಡ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT