ವಾಣಿಜ್ಯ

ಭಾರತದ ಎಮ್ಮೆ ಮಾಂಸ ರಫ್ತು ಏಪ್ರಿಲ್ ತಿಂಗಳಲ್ಲಿ ಶೇಕಡಾ 11.4 ರಷ್ಟು ಇಳಿಕೆ

Sumana Upadhyaya
ಮುಂಬೈ: ಭಾರತದ ಎಮ್ಮೆ ಮಾಂಸ ಮಾರಾಟ ಏಪ್ರಿಲ್ ನಲ್ಲಿ ಶೇಕಡಾ 11.4ರಷ್ಟು ಕುಸಿದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿದ್ದು 86,119 ಟನ್ ಗಳಷ್ಟು ಮಾಂಸ ಮಾರಾಟವಾಗಿದೆ ಎಂದು ಸರ್ಕಾರದ ಸಂಸ್ಥೆ ತಿಳಿಸಿದೆ. ಕಸಾಯಿ ಖಾನೆ ಮುಷ್ಕರ ಮತ್ತು ರೂಪಾಯಿ ಮೌಲ್ಯ ಹೆಚ್ಚಳದಿಂದ ಹಡಗು ಮೂಲಕ ಸಾಗಣೆ ವೆಚ್ಚ ಅಧಿಕವಾಗಿರುವುದು ಇದಕ್ಕೆ ಕಾರಣವಾಗಿದೆ.
 ಕಳೆದ ಮಾರ್ಚ್ ತಿಂಗಳಲ್ಲಿ ಕಸಾಯಿ ಖಾನೆ ಮುಷ್ಕರ ನಡೆದಿತ್ತು. ಇದರಿಂದಾಗಿ ಏಪ್ರಿಲ್ ನಲ್ಲಿ ಅನೇಕ ಕಸಾಯಿ ಖಾನೆಗಳು  ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಮುಂಬೈ ಮೂಲದ ರಫ್ತುದಾರ.
ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಎಮ್ಮೆ ಮಾಂಸ ರಫ್ತು ಮಾಡುವ ದೇಶ. ಉತ್ತರ ಪ್ರದೇಶದ ಕಸಾಯಿ ಖಾನೆ ಮತ್ತು ಮಾಂಸ ಮಾರಾಟಗಾರರು ಅನುಮತಿ ಹೊಂದಿರದ ಕಸಾಯಿ ಖಾನೆಯನ್ನು ಮುಚ್ಚಿದ ನಂತರ ಕಳೆದ ಮಾರ್ಚ್ ನಲ್ಲಿ ಮುಷ್ಕರ ನಡೆಸಿದ್ದರು. ಉತ್ತರ ಪ್ರದೇಶ ದೇಶದಲ್ಲಿಯೇ ಅತಿ ಹೆಚ್ಚು ಎಮ್ಮೆ ಮಾಂಸ ರಫ್ತು ಮಾಡುವ ರಾಜ್ಯವಾಗಿದೆ.
ಉಳಿದ ವಸ್ತುಗಳ ರಫ್ತುಗಳನ್ನು ನೋಡಿದಾಗ, ಭಾರತದ ಬಾಸ್ಮತಿ ಅಕ್ಕಿ ರಫ್ತು ಏಪ್ರಿಲ್ ತಿಂಗಳಲ್ಲಿ ಶೇಕಡಾ 15.6ರಷ್ಟು ಹೆಚ್ಚಾಗಿದೆ. ಇತರ ಅಕ್ಕಿಗಳ ಮಾರಾಟ ಶೇಕಡಾ 18.5ರಷ್ಟು ಕಡಿಮೆಯಾಗಿದೆ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
SCROLL FOR NEXT