ಹೈದರಾಬಾದ್: ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮ 2017-18ನೇ ಸಾಲಿನಲ್ಲಿ ಶೇ.7ರಿಂದ 8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಐಟಿ ತಜ್ಞರು ಹೇಳಿರುವುದಾಗಿ ಕೈಗಾರಿಕಾ ಸಂಸ್ಥೆ ನಾಸ್ಕಾಂ ಗುರುವಾರ ತನ್ನ ಮಾರ್ಗದರ್ಶಿಯಲ್ಲಿ ತಿಳಿಸಿದೆ.
ಐಟಿ ಉದ್ಯಮ ದೇಶಿಯ ಮಾರುಕಟ್ಟೆಯಲ್ಲಿ ಶೇ.10ರಿಂದ ಶೇ.11ರವರೆಗೆ ಬೆಳವಣಿಗೆ ಸಾಧಿಸುವ ಸಾಧ್ಯತೆ ಇದ್ದು, 2017-18ನೇ ಸಾಲಿನಲ್ಲಿ 1.3- 1.5ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ನಾಸ್ಕಾಂ ಅಧ್ಯಕ್ಷ ಆರ್ ಚಂದ್ರಶೇಖರ್ ಅವರು ವರದಿಗಾರರಿಗೆ ಹೇಳಿದ್ದಾರೆ. ಕಳೆದ ವರ್ಷ ಐಟಿ ಉದ್ಯಮ 1.7ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು.
ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗಳಿಂದ ವಿದೇಶಿ ಮಾರುಕಟ್ಟೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ಇದರ ಹೊರತಾಗಿಯೂ ಭಾರತೀಯ ಐಟಿ ಉದ್ಯಮ ಸಕಾರಾತ್ಮಕವಾಗಿಯೇ ಬೆಳವಣಿಗೆ ಸಾಧಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಐಟಿ ವಲಯದಲ್ಲಿ ಭಾರತದ ಪಾಲು ಸ್ಥಿರವಾಗಿಲ್ಲ, ಆದರೆ ಬೆಳೆಯುತ್ತಿದೆ ಎಂದು ಚಂದ್ರಶೇಖರ್ ಅವರು ಹೇಳಿದ್ದಾರೆ.