ವಾಣಿಜ್ಯ

ಲಾಕರ್ ನಲ್ಲಿರುವ ವಸ್ತುಗಳ ನಷ್ಟವಾದರೆ ಬ್ಯಾಂಕ್ ಜವಾಬ್ದಾರಿಯಲ್ಲ: ಆರ್ ಬಿಐ

Srinivasamurthy VN

ನವದೆಹಲಿ: ಬ್ಯಾಂಕ್ ಲಾಕರ್ ಗಳಲ್ಲಿರುವ ವಸ್ತುಗಳು ನಷ್ಟವಾದರೆ ಅದಕ್ಕೆ ಸಂಬಂಧ ಪಟ್ಟ ಬ್ಯಾಂಕ್ ಗಳು ಹೊಣೆಯಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಅರ್ಜಿಯೊಂದಕ್ಕೆ ಉತ್ತರಿಸುತ್ತ ಆರ್ ಬಿಐ ಈ ಬಗ್ಗೆ ಮಾಹಿತಿ ನೀಡಿದ್ದು, "ಬ್ಯಾಂಕ್‌ ಲಾಕರ್‌ ನಲ್ಲಿನ ಹಣ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ ಗಳು ಹೊಣೆಯಲ್ಲ  ಎಂದು ಲಾಕರ್‌ ಬಾಡಿಗೆ ಪಡೆಯುವ ವೇಳೆ ಮಾಡಿಕೊಳ್ಳುವ ಒಪ್ಪಂದದಲ್ಲಿ ನಮೂದಿಸಿರಲಾಗುತ್ತದೆ. ಹೀಗಾಗಿ ಬ್ಯಾಂಕ್‌ ಲಾಕರ್‌ ಒಂದು ವೇಳೆ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ ಗಳು ಜವಾಬ್ದಾರವಲ್ಲ  ಎಂದು ಉತ್ತರಿಸಿದೆ.

ಮೂಲಗಳ ಪ್ರಕಾರ್ ಆರ್ ಟಿಐ ಕಾರ್ಯಕರ್ತ ಹಾಗೂ ವಕೀಲ ಕುಶ್‌ ಕಾಲ್ರಾ ಎಂಬುವವರು ಈ ಅರ್ಜಿ ಸಲ್ಲಿಸಿದ್ದು, ಆರ್ ಬಿಐನ ನಿಯಮಗಳು ಸ್ಪರ್ಧಾತ್ಮಕತೆಗೆ ವಿರುದ್ಧವಾಗಿವೆ. ಮನೆಯಲ್ಲಿ ಅಸುರಕ್ಷಿತ ಎಂಬ ಕಾರಣಕ್ಕೇ ಬ್ಯಾಂಕ್‌  ಲಾಕರ್‌ ನಲ್ಲಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಆದರೆ ಲಾಕರ್‌ ನಲ್ಲಿ ಇಟ್ಟ ವಸ್ತುಗಳು ಕೂಡ ಕಳವಾದರೆ ಅದರ ಹೊಣೆಯನ್ನು ಬ್ಯಾಂಕ್‌ ಗಳು ಹೊರದೇ ಹೋದಾಗ, ಬ್ಯಾಂಕ್‌ ಲಾಕರ್‌ ಗೆ ಸಾಕಷ್ಟುಶುಲ್ಕತುಂಬಿ ವಸ್ತುಗಳನ್ನು  ಇಡುವುದರಿಂದ ಏನು ಪ್ರಯೋಜನ? ಎಂದು ವಾದಿಸಿದ್ದಾರೆ. ಅಂತೆಯೇ ಇಂತಹ ನಿಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇದೀಗ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮೊರೆ ಹೋಗಿದ್ದಾರೆ.

ಅಲ್ಲದೆ ತಮ್ಮ ಅರ್ಜಿಯಲ್ಲಿ ವಕೀಲ ಕುಶ್‌ ಕಾಲ್ರಾ ಅವರು, ಬ್ಯಾಂಕ್ ಆಫ್ ಇಂಡಿಯಾ, ಒರಿಯಂಟಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಸಿಒ ಹಾಗೂ ಕೆನರಾ ಬ್ಯಾಂಕ್ ಗಳಿಂದ ಬಂದ ವಿವಿಧ ಉತ್ತರಗಳನ್ನು ಕೂಡ  ಅರ್ಜಿಯೊಂದಿಗೆ ಲಗತ್ತಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT