ನವದೆಹಲಿ: ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 8 ರಾಜ್ಯಗಳ ವಿಧಾನಸಭೆಗಳು ಸರಕು ಮತ್ತು ಸೇವಾ ಮಸೂದೆ(ಜಿಎಸ್ ಟಿ) ಗೆ ಅನುಮೋದನೆ ನೀಡಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಏ.9 ರಂದು ತೆಲಂಗಾಣ ಸರ್ಕಾರ, ಏ.24 ರಂದು ಬಿಹಾರ, ಏ.26 ರಂದು ರಾಜಸ್ಥಾನ, ಏ.27 ರಂದು ಜಾರ್ಖಂಡ್, ಏ.28 ರಂದು ಛತ್ತೀಸ್ ಗಢ, ಮೇ.2 ರಂದು ಉತ್ತರಾಖಂಡ್, ಮೇ.3 ರಂದು ಮಧ್ಯಪ್ರದೇಶ ಸರ್ಕಾರ, ಮೇ.4 ರಂದು ಹರ್ಯಾಣ ಸರ್ಕಾರ ಜಿಎಸ್ ಟಿ ಮಸೂದೆಗಳನ್ನು ಅಂಗೀಕರಿಸಿವೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಜಿಎಸ್ ಟಿ ಮಸೂದೆಗೆ ಸಂಬಂಧಿಸಿದ 4 ಪೂರಕ ಮಸೂದೆಗಳಿಗೆ ಅರುಣ್ ಜೇಟ್ಲಿ ನೇತೃತ್ವದ ಸಮಿತಿ ಮಾರ್ಚ್.16 ರಂದು ಅನುಮೋದನೆ ನೀಡಿತ್ತು. ತೆರಿಗೆ ದರಗಳನ್ನು ನಿಗದಿಪಡಿಸಲು ಮೇ.18-19 ರಂದು ಶ್ರೀನಗರದಲ್ಲಿ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ತೆರಿಗೆ ದರಗಳು ಅಂತಿಮಗೊಂಡ ನಂತರ ಜುಲೈ 1 ರಿಂದ ಜಿಎಸ್ ಟಿ ಜಾರಿಗೆ ಬರಲಿದೆ.