ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ದರ 2018 ರ ವೇಳೆಗೆ ಶೇ.7.5 ರಷ್ಟಾಗಲಿದೆ ಎಂದು ಏಷ್ಯಾ ಹಾಗೂ ಪೆಸಿಫಿಕ್ ನ ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಆಯೋಗ (ಇಎಸ್ ಸಿಎಪಿ) ವರದಿ ಹೇಳಿದೆ.
2017 ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.7.1 ರಷ್ಟಿದೆ. ಹೆಚ್ಚಿದ ಮೂಲಸೌಕರ್ಯ ಖರ್ಚುಗಳಿಂದ ಹಾಗೂ ಖಾಸಗಿ ಮತ್ತು ಸಾರ್ವಜನಿಕ ಬಳಕೆ ಹೆಚ್ಚಾಗಿರುವುದರಿಂದ ಮುಂದಿನ ವರ್ಷಕ್ಕೆ ಜಿಡಿಪಿ ದರ ಶೇ.7.5 ರಷ್ಟಾಗಲಿದೆ ಎಂದು ವರದಿ ಹೇಳಿದೆ.
ಕಳೆದ ತಿಂಗಳು ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಅಂದಾಜು ಮಂಡಿಸಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಹ ಇದೇ ರೀತಿಯ ವಿಶ್ವಾಸ ವ್ಯಕ್ತಪಡಿಸಿ, 2017-18 ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.7.7 ರಷ್ಟಾಗಲಿದೆ ಎಂದಿತ್ತು. ಇನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸಹ ಮುಂದಿನ ವರ್ಷದ ಜಿಡಿಪಿ ಬೆಳವಣಿಗೆ ದರವನ್ನು ಶೇ.7.6 ಕ್ಕೆ ಅಂದಾಜಿಸಿದೆ.