ವಾಣಿಜ್ಯ

ಜಿಎಸ್ ಟಿ; ಶೇಕಡಾ 81ರಷ್ಟು ವಸ್ತುಗಳ ಮೇಲೆ 18%ಗಿಂತ ಕಡಿಮೆ ತೆರಿಗೆ: ಸರ್ಕಾರ

Sumana Upadhyaya
ನವದೆಹಲಿ: ಬಹುತೇಕ ವಸ್ತುಗಳಿಗೆ ಶೇಕಡಾ 18ಕ್ಕಿಂತ ಕಡಿಮೆ ತೆರಿಗೆ ದರ ನಿಗದಿಪಡಿಸುವ ಮೂಲಕ ಇಂದು ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆಯಲ್ಲಿ 1,211 ವಸ್ತುಗಳ ತೆರಿಗೆ ದರಗಳನ್ನು ನಿಗದಿಪಡಿಸಲಾಯಿತು.
ಸರಕು ಮತ್ತು ಸೇವಾ ತೆರಿಗೆ ಮಂಡಳಿ ಇಂದು 7 ಸರಕು ಮತ್ತು ಸೇವಾ ತೆರಿಗೆ ನಿಯಮಗಳನ್ನು ಅನುಮೋದನೆ ಮಾಡಿತು. ಶ್ರೀನಗರದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾನೂನು ಸಮಿತಿ ಉಳಿದೆರಡು ಸರಕು ಮತ್ತು ಸೇವಾ ತೆರಿಗೆ ನಿಯಮಗಳ ಬಗ್ಗೆ ಪರಿಶೀಲಿಸುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.
ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಸರಕುಗಳನ್ನು ತೆರಿಗೆಯಡಿ ನಿಗದಿಪಡಿಸಲು ಇಂದಿನ ಸಭೆಯನ್ನು ಕರೆಯಲಾಯಿತು. ನಾಳೆ ಅಂತಿಮ ದರಗಳನ್ನು ನಿಗದಿಪಡಿಸಲಾಗುವುದು ಎಂದರು.
ಸರಕು ಮತ್ತು ಸೇವಾ ತೆರಿಗೆ ದರದ ಶೇಕಡಾ 18ಕ್ಕಿಂತ ಕಡಿಮೆ ದರದಲ್ಲಿ ಶೇಕಡಾ 81ಕ್ಕಿಂತ ಹೆಚ್ಚಿನ ಸರಕುಗಳಿಗೆ ತೆರಿಗೆ ದರ ನಿಗದಿಪಡಿಸಲಾಗುವುದು. ಶೇಕಡಾ 19ರಷ್ಟು ಸರಕುಗಳಿಗೆ ಶೇಕಡಾ 18ಕ್ಕಿಂತ ಕಡಿಮೆ ತೆರಿಗೆ ದರ ನಿಗದಿಪಡಿಸಲಾಗುವುದು. 
ಸಕ್ಕರೆ, ಚಹಾ, ಕಾಫಿ ಮತ್ತು ಖಾದ್ಯ ತೈಲಕ್ಕೆ ಶೇಕಡಾ 5ಕ್ಕಿಂತ ಕಡಿಮೆ ದರ, ಹಾಲು, ಧಾನ್ಯಗಳಿಗೆ ತೆರಿಗೆ ವಿನಾಯ್ತಿ ನೀಡಲಾಗುವುದು.
ಕಲ್ಲಿದ್ದಲಿಗೆ ಈಗಿರುವ ಶೇಕಡಾ 11.69ಕ್ಕಿಂತ ಶೇಕಡಾ 5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಟೂತ್ ಪೇಸ್ಟ್, ತಲೆಗೆ ಹಾಕುವ ಎಣ್ಣೆ, ಸೋಪುಗಳಿಗೆ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಪ್ರಸ್ತುತ ಇವುಗಳಿಗೆಲ್ಲಾ ಶೇಕಡಾ 28ರಷ್ಟು ತೆರಿಗೆಯಿದೆ. 
ಸಾಮಾನ್ಯ ದಿನನಿತ್ಯ ಬಳಸುವ ವಸ್ತುಗಳಿಗೆ ಶೇಕಡಾ 12ರಿಂದ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗುತ್ತದೆ.
SCROLL FOR NEXT