ವಾಣಿಜ್ಯ

ಹಣಕಾಸು ಸಚಿವರ ಸಭೆ: ಶೇಕಡಾ 80ರಿಂದ 90ರಷ್ಟು ಸರಕು, ಸೇವೆಗಳ ತೆರಿಗೆ ಅಂತಿಮ

Sumana Upadhyaya
ಶ್ರೀನಗರ: ದಿನನಿತ್ಯದ ಅಗತ್ಯ ವಸ್ತುಗಳ ಶೇಕಡಾ 80ರಿಂದ 90ರಷ್ಟು ಸರಕು ಮತ್ತು ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಇಂದು ತೆರಿಗೆ ದರಗಳನ್ನು  ಅಂತಿಮಗೊಳಿಸಿದೆ. 
ಕೇಂದ್ರ  ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆಗಳಿಗೆ ನಿಯಮಗಳನ್ನು ಅನುಮೋದಿಸಿದೆ. 
ಶೇಕಡಾ 80ರಿಂದ 90ರಷ್ಟು ವಸ್ತುಗಳಿಗೆ 5,12,18 ಅಥವಾ ಶೇಕಡಾ 28 ಎಂದು ಗುರುತಿಸಲಾಗಿದೆ.ಸರಕು ಮತ್ತು ಸೇವಾ ತೆರಿಗೆಯಡಿ ಅಬಕಾರಿ ಸುಂಕ, ವ್ಯಾಟ್ ಅಥವಾ ಸೇವಾ ತೆರಿಗೆಗೆಳನ್ನು ಕೂಡ ಪರಿಗಣಿಸಲಾಗುತ್ತದೆ.
ತೆರಿಗೆ ದರಗಳ ಸಂಪೂರ್ಣ  ಮಾಹಿತಿ ನಾಳೆ ಸಭೆ ಮುಗಿದ ನಂತರ ಗೊತ್ತಾಗಲಿದೆ. ಅನೆಕ ರಾಜ್ಯಗಳ ಹಣಕಾಸು ಸಚಿವರು  ರೇಷ್ಮೆ ನೂಲು, ಪೂಜಾ ಸಾಮಗ್ರಿಗಳು ಮತ್ತು ಕರಕುಶಲ ವಸ್ತುಗಳ ಮೇಲೆ ವಿನಾಯ್ತಿ ಬಯಸಿದ್ದಾರೆ.
SCROLL FOR NEXT