ಮುಂಬೈ: ಸತತ ಮೂರನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಲಾಭಾಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಸೆನ್ಸೆಕ್ಸ್ 81.07 ಅಂಕಗಳ ಏರಿಕೆ ಕಂಡಿದೆ.
ಸೆನ್ಸೆಕ್ಸ್ 81.07 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಒಟ್ಟು 31,109.28 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ 95.15 ಅಂಕಗಳ ಏರಿಕೆಯೊಂದಿಗೆ 9,604.90 ಅಂಕಗಳಿಗೆ ಏರಿಕೆಯಾಗಿದ್ದು, ಗ್ರಾಹಕ ಸರಕುಗಳ ಕ್ಷೇತ್ರದ ಷೇರುಗಳ ಮೌಲ್ಯ ಶೇ.3ರಷ್ಟು ಹೆಚ್ಚಳವಾಗಿದೆ.
ಪ್ರಮುಖವಾಗಿ ಡಾಬರ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಯಂತಹ ಸಂಸ್ಥೆಯಗಳ ಷೇರುಗಳ ಮೌಲ್ಯ ಶೇ.3ರಷ್ಟು ಏರಿಕೆಯಾಗಿದೆ. ಆದರೆ ವೈದ್ಯಕೀಯ ಕ್ಷೇತ್ರದ ಷೇರುಗಳಲ್ಲಿ ಕುಸಿತ ಕಂಡುಬಂದಿದ್ದು, ಸನ್ ಫಾರ್ಮಾ ಶೇರುಗಳ ಮೌಲ್ಯದಲ್ಲಿ ಶೇ.13.2 ರಷ್ಟು ಕುಸಿತ ಕಂಡುಬಂದಿದೆ. ಕಳೆದ ಶುಕ್ರವಾರ ಸಂಸ್ಥೆ ಬಿಡುಗಡೆ ಮಾಡಿದ್ದ ಮಾರ್ಚ್ ತ್ರೈಮಾಸಿಕ ವರದಿಯಲ್ಲಿ ಸಂಸ್ಥೆಯ ಲಾಭಾಂಶದಲ್ಲಿ ಶೇ.14ರಷ್ಟು ಕುಸಿತವಾಗಿರುವುದು ಕಂಡುಬಂದಿತ್ತು. ಇದೂ ಕೂಡ ಷೇರು ಮೌಲ್ಯ ಕುಸಿಯಲು ಕಾರಣ ಎಂದು ಹೇಳಲಾಗುತ್ತಿದೆ.