ದೇಬಜಾನಿ ಘೋಷ್ ನಾಸ್ಕಾಂನ ಮೊದಲ ಮಹಿಳಾ ಅಧ್ಯಕ್ಷೆ
ಸಾಫ್ಟ್ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ)ದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ದೇಬಜಾನಿ ಘೋಷ್ ಆಯ್ಕೆಯಾಗಿದ್ದಾರೆ.
ನವದೆಹಲಿ: ಸಾಫ್ಟ್ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ)ದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ದೇಬಜಾನಿ ಘೋಷ್ ಆಯ್ಕೆಯಾಗಿದ್ದಾರೆ.
ನಾಸ್ಕಾಂ ನ ಪ್ರಸಕ್ತ ಅಧ್ಯಕ್ಷರಾಗಿರುವ ಆರ್. ಚಂದ್ರಶೇಖರ್ ಅವರ ಅಧಿಕಾರ ಅವಧಿಯು 2018 ಮಾರ್ಚ್ ಗೆ ಕೊನೆಗೊಳ್ಳಲಿದ್ದು ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ದೇಬಜಾನಿ ನೇಮಕವಾಗಲಿದ್ದಾರೆ.
ಇಂಟೆಲ್ನ ದಕ್ಷಿಣ ಭಾರತದ ಮಾಜಿ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ದೇಬಜಾನಿ ಘೋಷ್ ಪ್ರಸ್ತುತ ನಾಸ್ಕಾಂ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯೆ ಮತ್ತು ಫೌಂಡೇಷನ್’ ಟ್ರಸ್ಟಿ ಆಗಿದ್ದಾರೆ.