ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.ರೆಪೊ ದರ ಈಗ ಶೇಕಡಾ 6 ಮತ್ತು ರಿವರ್ಸ್ ರೆಪೊ ದರ ಶೇಕಡಾ 5.75ರಷ್ಟಿದೆ.
ಐವರು ಸದಸ್ಯರನ್ನೊಳಗೊಂಡ ವಿತ್ತೀಯ ಯೋಜನೆ ಸಮಿತಿ ಇಂದು ಸಭೆ ನಡೆಸಿ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕೂಡ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಇನ್ನು ರಿವರ್ಸ್ ರೆಪೊ ದರವನ್ನು ಕೂಡ ಬದಲಾಯಿಸದೆ ಶೇಕಡಾ 5.75ರಷ್ಟು ಕಾಪಾಡಿಕೊಂಡು ಹೋಗಲು ನಿರ್ಧರಿಸಿದೆ.
ರಿಸರ್ವ್ ಬ್ಯಾಂಕ್ ನೀತಿ ದರವನ್ನು ಕೂಡ ಕಳೆದ ಆರು ವರ್ಷಗಳಲ್ಲಿ ಬದಲಾಯಿಸದೆ ಶೇಕಡಾ 6ರಷ್ಟು ಕಾಪಾಡಿಕೊಂಡು ಬಂದಿದೆ.
ಆರ್ಥಿಕ ಬೆಳವಣಿಗೆಯ ಮುನ್ಸೂಚನೆ ಈ ಹಿಂದೆ ಅಂದಾಜು ಮಾಡಿದ್ದ ಶೇಕಡಾ 7.3ರಿಂದ ಶೇಕಡಾ 6.7ಕ್ಕೆ ಇಳಿಕೆಯಾಗಲಿಗೆ ಎಂದು ಹೇಳಲಾಗಿದೆ.
ರೆಪೊ ದರ ಈಗ ಶೇಕಡಾ 6 ಮತ್ತು ರಿವರ್ಸ್ ರೆಪೊ ದರ ಶೇಕಡಾ 5.75ರಷ್ಟಿದೆ.
ಇದೇ ತಿಂಗಳು 14ರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ಸ್ಟ್ಯಾಚುಟರಿ ಲಿಕ್ವಿಡಿಟಿ ರೇಶಿಯೋವನ್ನು 50 ಬೇಸಿಸ್ ಪಾಯಿಂಟ್ ಗಳಿಂದ ಶೇಕಡಾ 19.5ಕ್ಕೆ ಇಳಿಸಿವುದಾಗಿ ಸಮಿತಿ ಘೋಷಣೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics